ಬೆಳ್ತಂಗಡಿ ಡಯಾಲಿಸೀಸ್ ರೋಗಿಗಳ ಶೋಚಾನೀಯ ಸ್ಥಿತಿ: ಮಾಹಿತಿ ನೀಡದೆ ಆಸ್ಪತ್ರೆಗೆ ಭೇಟಿ ನೀಡಿ ತೆರಳಿದ ಜಿಲ್ಲಾ ಆರೋಗ್ಯಾಧಿಕಾರಿ: ಡಿಎಚ್ಒ ವಿರುದ್ಧ ಹಾರಿಹಾಯ್ದ ಮಾಜಿ ಶಾಸಕ ವಸಂತ ಬಂಗೇರ:

 

 

ಬೆಳ್ತಂಗಡಿ:ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸೀಸ್ ರೋಗಿಗಳು ಶೋಚಾನೀಯ ಸ್ಥಿತಿಯಲ್ಲಿದ್ದು. ಇಲ್ಲಿನ ಅವ್ಯವಸ್ಥೆಯಿಂದ ಪ್ರಾಣ ಭಯದಲ್ಲಿ ದಿನ ದೂಡುವಂತಾಗಿದೆ. ರೋಗಿಗಳ ಸ್ಥಿತಿ ದಿನದಿಂದ ದಿನೇ ಬಿಗಾಡಾಯಿಸುತಿದ್ದು ಈ ಬಗ್ಗೆ ಸೋಮವಾರ ರೋಗಿಯೊಬ್ಬರು ಕಣ್ಣೀರು ಸುರಿಸುತ್ತ ಬದುಕುವ ಆಸೆಯಂತೂ ನಮಗಿಲ್ಲ ಅದರೆ ಇಂತಹ ನೋವು ನೀಡುವುದಕ್ಕಿಂತ ಯಾವುದಾದರೂ ಮದ್ದು ಕೊಟ್ಟು ಸಾಯಿಸಿಬಿಡಿ ಎಂದು ಡಿಎಚ್ಒ ಅವರಲ್ಲಿ ಪೋನ್ ಮೂಲಕ ಗೋಗರೆದು ಕಣ್ಣೀರು ಸುರಿಸಿದ್ದರು. ಅದಲ್ಲದೇ ಮಾಜಿ ಶಾಸಕ ವಸಂತ ಬಂಗೇರ ಕೂಡ ಡಿಎಚ್ಒ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.ಈ ಬಗ್ಗೆ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡುವ ಬಗ್ಗೆ ಭರವಸೆ ನೀಡಿದ್ದ ಅವರು ಏಕಾಏಕಿ ಯಾರಿಗೂ ಮಾಹಿತಿ ನೀಡದೆ ಭೇಟಿ ನೀಡಿ ಅವಸರದಲ್ಲಿ ತೆರಳಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಜಿ ಶಾಸಕರು ಡಿಎಚ್ಒ ವಿರುದ್ಧ ಹರಿಹಾಯ್ದರಲ್ಲದೇ
ಡಿಎಚ್ ಒ ಅವರು ಡಯಾಲಿಸಿಸ್ ರೋಗಿಗಳ ಜತೆ ಚೆಲ್ಲಾಟವಾಡುತ್ತಿದ್ದಾರೆ, ಹೊರತು ಬೇಕಾಗುವ ವ್ಯವಸ್ಥೆಗಳು ಮಾಡುವತ್ತ ಗಮನಹರಿಸುತ್ತಿಲ್ಲ” ಎಂದು ಆರೋಪಿಸಿದರು.
ಈ ಬಗ್ಗೆ ಮಾತನಾಡಿದ ಅವರು “ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ದಿನೇಶ್ ಶೆಟ್ಟಿ ಎಂಬವರು ಸೋಮವಾರ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರದಲ್ಲಿನ ಅವ್ಯವಸ್ಥೆಗಳನ್ನು ತಿಳಿಸಿ,ಚಿಕಿತ್ಸೆ ಪಡೆಯುತ್ತಿರುವ ಹಲವು ಮಂದಿ ಎಚ್ ಸಿವಿಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದಾಗ ಈ ಬಗ್ಗೆ ಡಿಎಚ್ ಒ ಅವರನ್ನು ಸಂಪರ್ಕಿಸಲಾಗಿತ್ತು ಅವರು ಮಂಗಳವಾರ ಸಂಜೆ 4:30ಕ್ಕೆ ಆಗಮಿಸುವ ಕುರಿತು ತಿಳಿಸಿದ್ದರು.
ಆದರೆ ಡಿಎಚ್ ಒ ಮಧ್ಯಾಹ್ನವೇ ಯಾರಿಗೂ ತಿಳಿಸದೆ ಆಗಮಿಸಿ ವಾಪಸು ಹೋಗಿದ್ದಾರೆ ಈ ಬಗ್ಗೆ ದೂರವಾಣಿ ಕರೆ ಮಾಡಿ ಕೇಳಿದಾಗ ಡಿಸಿ ಮೀಟಿಂಗ್ ಇದೆ ಎಂದು ತಿಳಿಸಿದರು. ಅವರು ಮಧ್ಯಾಹ್ನ ಆಗಮಿಸುವ ಕುರಿತು ಯಾವುದೇ ಸೂಚನೆ ನೀಡದಿರುವುದು ವಿಪರ್ಯಾಸವಾಗಿದೆ. ಬಳಿಕ ಅವರನ್ನು ಸಂಪರ್ಕಕ್ಕೆ ಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ” ಎಂದರು.

ಡಯಾಲಿಸಿಸ್ ಕೇಂದ್ರದಲ್ಲಿರುವ ಎಚ್ ಸಿವಿ ಪೀಡಿತ ಮಂದಿ ತಮಗೆ ಬೇಕಾಗಿರುವ 28 ದಿನದ ಮಾತ್ರೆಗಳಿಗೆ 17,500ರೂ. ವೆಚ್ಚ ಭರಿಸಬೇಕಾಗುತ್ತದೆ. ಒಟ್ಟು 20 ಮಂದಿ ಎಚ್ ಸಿವಿ ಪೀಡಿತರಿದ್ದು ತಮ್ಮಲ್ಲಿ ಇಷ್ಟೊಂದು ದುಬಾರಿ ಔಷಧಿ ಖರೀದಿಸುವ ಶಕ್ತಿ ಇಲ್ಲ ಆದರೆ ಜೀವ ಉಳಿಯಬೇಕಾದರೆ ಔಷಧಿ ಸೇವಿಸಬೇಕಾದ ಅಗತ್ಯವಿದೆ ಎಂದರು ಮೂರುವರೆ ಲಕ್ಷ ರೂ.ಗಳ ಮಾತ್ರೆಯನ್ನು ಬುಧವಾರದಂದು ಸ್ವಂತ ದುಡ್ಡಿನಿಂದ ಖರೀದಿಸಿ ರೋಗಿಗಳಿಗೆ ನೀಡುವುದಾಗಿ ತಿಳಿಸಿದರು.
ಬಳಿಕ ಅವರು ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ಅವರು ಬುಧವಾರ ಸಂಜೆಯೊಳಗೆ ಸರಕಾರದಿಂದ ಈ ಮಾತ್ರೆಗಳ ವ್ಯವಸ್ಥೆ ಮಾಡುವ ಕುರಿತು ತಿಳಿಸಿದರು.
ಬೆಂಗಳೂರಿನ ರೋಟರಿ ಸಂಸ್ಥೆ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಒಟ್ಟು ಆರು ಡಯಾಲಿಸಿಸ್ ಯಂತ್ರಗಳನ್ನು ಸರಕಾರಿ ಆಸ್ಪತ್ರೆಗೆ ನೀಡುವುದಾಗಿ ತಿಳಿಸಿದ್ದು ಅವರನ್ನು ತಕ್ಷಣ ಸಂಪರ್ಕಿಸಿ ವ್ಯವಸ್ಥೆ ಮಾಡುವುದಾಗಿ ಬಂಗೇರ ತಿಳಿಸಿದರು.

error: Content is protected !!