ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿದ್ದು . ಬಹಳ ಬಿರುಸಿನಿಂದ ಸಾಗುತ್ತಿದೆ. ದೆಹಲಿ ಮೂಲದ ಡಿ.ಪಿ. ಜೈನ್ ಎಂಬ ಗುತ್ತಿಗೆದಾರರು ಕೆಲಸವನ್ನು ನಿರ್ವಹಿಸುತಿದ್ದಾರೆ. ಬಹಳ ವೇಗವಾಗಿ ಕಾಮಗಾರಿ ನಡೆದರೂ ಕೆಲವೊಂದು ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು ರೋಗದ ಭೀತಿ ಎದುರಿಸುವಂತಾಗಿದೆ. ಈ ಬಗ್ಗೆ ಶಾಲಾ ವಿದ್ಯಾರ್ಥಿ ಸೇರಿದಂತೆ ಸಾರ್ವಜನಿಕರು “ಪ್ರಜಾಪ್ರಕಾಶ ನ್ಯೂಸ್” ಕಛೇರಿಗೆ ಪೋನ್ ಮೂಲಕ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ.ರಸ್ತೆ ಅಗಲೀಕರಣ ಸಂತೋಷದ ವಿಚಾರವೇ ಅದರೆ ಸರಿಯಾದ ರೀತಿಯಲ್ಲಿ ಕಾಮಗಾರಿ ನಿರ್ವಹಣೆ ಆಗುತ್ತಿಲ್ಲ ಬೇಸಿಗೆ ಕಾಲವಾದ್ದರಿಂದ ದೂಳಿನಿಂದಾಗಿ ಬಸ್ ಸೇರಿದಂತೆ ವಾಹನಗಳಲ್ಲಿ ದಿನ ನಿತ್ಯ ಓಡಾಡುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ಸಂಚಾರಿಸಲು ಸಂಕಟ ಎದುರಿಸುವಂತಾಗಿದೆ. ಈಗಾಗಲೇ ಹಲವಾರೂ ಮಕ್ಕಳಿಗೆ ಡಸ್ಟ್ ಅಲರ್ಜಿಯಿಂದಾಗಿ ಶೀತ ತಲೆ ನೋವು ಜ್ವರದಂತಹ ಲಕ್ಷಣಗಳು ಉಲ್ಪಣಿಸಿದೆ. ಅದ್ದರಿಂದ ರಸ್ತೆ ಬದಿ ನೀರು ಹಾಕಿ ದೂಳು ಬಾರದಂತೆ ಕ್ರಮ ವಹಿಸಬೇಕು ಎಂದಿದ್ದಾರೆ. ಈಗಾಗಲೇ ಹವಾಮಾನ ವೈಪರೀತ್ಯಗಳಿಂದ ಜನಸಾಮಾನ್ಯರಿಗೆ ಶೀತ, ತಲೆನೋವು, ಜ್ವರ ಎಲ್ಲೆಲ್ಲೂ ಹೆಚ್ಚಾಗತೊಡಗಿದೆ. ಅದಲ್ಲದೇ ರಸ್ತೆ ಕಾಮಗಾರಿ ವೇಳೆ ಉಂಟಾಗುವ ದೂಳಿನಿಂದಾಗಿ ಮತ್ತಷ್ಟು ಜನರಿಗೆ ಡಸ್ಟ್ ಅಲರ್ಜಿ ಹೆಚ್ಚಾಗುವ ಲಕ್ಷಣ ಕಂಡು ಬರುತ್ತಿವೆ. ರಸ್ತೆ ಬದಿ ಕಟ್ಟುತಿರುವ ಚರಂಡಿ ಕಾಮಗಾರಿಗೂ ಕ್ಯೂರಿಂಗ್ ಗಾಗಿ ನೀರು ಹಾಕುವ ಕ್ರಮ ಇಲ್ಲ ಮಳೆ ಬಂದರೆ ಮಾತ್ರ ಕ್ಯೂರಿಂಗ್ ಈ ರೀತಿ ಕಾಮಗಾರಿ ನಡೆದರೆ ಅದರ ಆಯುಷ್ಯ ಎಷ್ಟು ಸಮಯ ಎಂಬ ಪ್ರಶ್ನೆಯನ್ನೂ ಸಾರ್ವಜನಿಕರು ಕೇಳುತಿದ್ದಾರೆ. ಈ ಬಗ್ಗೆ ಅಧಿಕಾರಿಗಳು, ಇಂಜಿನಿಯರ್ ಗಳು ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಇಷ್ಟು ದೊಡ್ಡ ಮೊತ್ತದ ಕಾಮಗಾರಿ ಸರಿಯಾದ ರೀತಿಯಲ್ಲಿ ನಡೆಯಬೇಕು ಎಂಬುವುದೇ ಎಲ್ಲರ ಆಗ್ರಹವಾಗಿದೆ.