ಮಾನವನ ಮುಖ, ಕಣ್ಣುಗಳನ್ನು ಹೋಲುವ ಮೇಕೆ ಮರಿ ಜನನ: ಹೇಗಿದ್ದಾಳೆ ಗೊತ್ತಾ ರಾಣಿ..?

ಇಂದೋರ್: ಮಾನವರಂತೆ ಮುಖ ಹಾಗೂ ಕಣ್ಣಿರುವ ಮೇಕೆ ಮರಿಯೊಂದು ಜನನವಾಗಿ ಭಾರೀ ಆಶ್ಚರ್ಯ ಹುಟ್ಟಿಸಿದೆ.

ಮಧ್ಯಪ್ರದೇಶದ ಇಂದೋರ್‌ನ ಚಂದನ್ ನಗರದಲ್ಲಿ ಅನ್ವರ್ ಖಾನ್ ಎಂಬವರ ಮನೆಯಲ್ಲಿ ಡಿ.13ಕ್ಕೆ ಜನಿಸಿದ ಮೇಕೆ ಮರಿಯ ತಲೆ ಮನುಷ್ಯನಂತೆ ಕಾಣುತ್ತಿದೆ. ಈ ಮೇಕೆಯ ಎರಡೂ ಕಣ್ಣುಗಳು ಮುಂಭಾಗದಲ್ಲಿದ್ದು, ಮಾನವ ಅಥವಾ ಕೋತಿಯ ಮುಖದಂತೆ ಇರುವುದು ಕಂಡು ಬರುತ್ತದೆ. ಈ ಕಣ್ಣುಗಳಿಂದಲೇ ಮೇಕೆಮರಿ ಎಲ್ಲಾ ನೋಡುತ್ತಿದೆ.

ವಿಸ್ಮಯವೆಂಬಂತೆ ಈ ಮರಿ ಈ ರೀತಿಯಾಗಿ ಜನಿಸಿದರು ಆರೋಗ್ಯವಾಗಿದೆ. ಮನೆಮಂದಿ ಈ ಮೇಕೆ ಮರಿಗೆ ರಾಣಿ ಎಂದು ನಾಮಕರಣ ಮಾಡಿದ್ದಾರೆ.

error: Content is protected !!