ಬೆಳ್ತಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ಬ್ರಹ್ಮ ಕಲಶೋತ್ಸವ ಸಮಿತಿ ರಚನಾ ಸಭೆಯು ಡಿ 01 ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ವಹಿಸಿದ್ದರು.ಸಭೆಯಲ್ಲಿ ಬ್ರಹ್ಮಕಲಶೋತ್ಸವ ಯಾವ ರೀತಿಯಲ್ಲಿ ವ್ಯವಸ್ಥಿತ ರೀತಿಯಲ್ಲಿ ಮಾಡಬಹುದು ಎಂಬ ಬಗ್ಗೆ ಚರ್ಚಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ಕೊಡುಗೈದಾನಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರನ್ನು ಸರ್ವನುಮತದಿಂದ ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ,
ಕಾರ್ಯಾಧ್ಯಕ್ಷರಾಗಿ ಸಂತೋಷ್ ಕುಮಾರ್ ಜೈನ್:ಪ್ರಧಾನ ಕಾರ್ಯದರ್ಶಿಯಾಗಿ ಚಿದಾನಂದ ಇಡ್ಯಾ:ಉಪಾಧ್ಯಕ್ಷರುಗಳಾಗಿ ಪ್ರಭಾಕರ ಬಂಗೇರ, ಶ್ರೀಕಾಂತ್ ಶೆಟ್ಟಿ ಮುಂಡಾಡಿ, ನಾರಾಯಣ ಮೂಲ್ಯ, ಅಜಿತ್ ಶೆಟ್ಟಿ ಕೊರ್ಯರ್ ಕಾರ್ಯದರ್ಶಿಗಳಾಗಿ ಸಂತೋಷ್ ಹಲ್ಲಂದಡಿ, ಶಶಿರಾಜ್ ಶೆಟ್ಟಿ, ಧನಲಕ್ಷ್ಮಿ, ಆನಂದ ಶೆಟ್ಟಿ ಐಸಿರಿ, ಕೋಶಾಧಿಕಾರಿ ವಸಂತ ಗೌಡ, ಜತೆ ಕಾರ್ಯದರ್ಶಿ ಲೀಲಾವತಿ ಸೋಣಂದೂರು,ಇವರನ್ನು ಆಯ್ಕೆ ಮಾಡಲಾಯಿತು.
12 ವರ್ಷಗಳಿಗೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವ ಈ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಒಂದೇ ಮನಸ್ಸಿನಿಂದ ಲಾಭಾಂಶದ ಒಂದು ಪಾಲನ್ನು ಸಂತೋಷದಿಂದ ಒಪ್ಪಿಸಿದರೆ ಒಳ್ಳೆಯ ರೀತಿಯಲ್ಲಿ ವೈಭವದ ಬ್ರಹ್ಮಕಲಶ ನಡೆಯಲು ಯಾವುದೇ ರೀತಿಯಲ್ಲೂ ತೊಂದರೆಯಾಗದು. ಅದ್ದರಿಂದ ಎಲ್ಲರೂ ಈ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದರು.
ಸಭೆಯಲ್ಲಿ ತಂತ್ರಿಗಳಾದ ಉದಯ ಪಾಂಗಣ್ಣಾಯ, ಮಾಜಿ ಶಾಸಕ ಪ್ರಭಾಕರ ಬಂಗೇರ, ಗೋಪಾಲ ಶೆಟ್ಟಿ ಕೊರ್ಯರ್, ಸುಕೇಶ್ ಕಡಂಬು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಉಪ್ಪಡ್ಕ,ಉಪಸ್ಥಿತರಿದ್ದರು. ಚಿದಾನಂದ ಇಡ್ಯಾ ಕಾರ್ಯಕ್ರಮ ನಿರೂಪಿಸಿ ಶಾಂತಾ ಜೆ ಬಂಗೇರ ಧನ್ಯವಾದವಿತ್ತರು.