,ತಾಯಿಯ ಎದುರೇ ವಿದ್ಯಾರ್ಥಿಗೆ ಹಲ್ಲೆ: ಇಬ್ಬರು ಶಿಕ್ಷಕರು ಸೇರಿದಂತೆ ಎಸ್ ಡಿ ಎಂಸಿ ಅಧ್ಯಕ್ಷನ ವಿರುದ್ದ ಪ್ರಕರಣ ದಾಖಲು:

 

 

ಬೆಳ್ತಂಗಡಿ: ಸೈಕಲ್ ಮಾರಾಟದ ವಿಚಾರವಾಗಿ ತಾಯಿಯ ಎದುರೇ ವಿದ್ಯಾರ್ಥಿಯ ಮೇಲೆ ಎಸ್ ಡಿ ಎಂ ಸಿ ಅಧ್ಯಕ್ಷ ಹಲ್ಲೆ ನಡೆಸಿದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಚ್ಚಿನ ಗ್ರಾಮದಲ್ಲಿ ನಡೆದಿದೆ.
ಮಚ್ಚಿನ ಗ್ರಾಮದ ಶಾಲೆಯೊಂದರಲ್ಲಿ ಕಲಿಯುತಿದ್ದ ಬಾಲಕನು ತನ್ನ ಸೈಕಲನ್ನು ಮಾರಾಟ ಮಾಡಿದ ವಿಚಾರವಾಗಿ ನ 28 ರಂದು ಬೆಳಿಗ್ಗೆ ಶಾಲಾ ಮೇಲುಸ್ತುವಾರಿ ಅಧ್ಯಕ್ಷ ಪರಮೇಶ್ ಸೈಕಲ್ ವಿಚಾರದಲ್ಲಿ ಪ್ರಶ್ನಿಸಿ ತಾಯಿಯ ಎದುರೇ ಬಾಲಕನಿಗೆ ಕೋಲು ಹಾಗೂ ಕೈಯಿಂದ ಹೊಡೆದಿದ್ದು ಇದಕ್ಕೆ ಶಿಕ್ಷಕರಾದ ಪ್ರಮೀಳಾ ಮತ್ತು ರಮೇಶ್ ಪ್ರೇರೆಪಿಸಿದ್ದಾರೆ.ಅದಲ್ಲದೇ ಹಲ್ಲೆ ವಿಚಾರವನ್ನು ಯಾರಲ್ಲೂ ತಿಳಿಸಿದರೆ ಸೈಕಲ್ ಕಳ್ಳತನ ಮಾಡಿ ಮಾರಾಟ ಮಾಡಿರುವ ಬಗ್ಗೆ ಬೆದರಿಕೆ ಹಾಕಿದ್ದಾರೆ. ನ 30 ರಂದು ವಿದ್ಯಾರ್ಥಿಗೆ ಎದೆ ನೋವು ಕಾಣಿಸಿಕೊಂಡಿದ್ದು ಚಿಕಿತ್ಸೆಗಾಗಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ವಿದ್ಯಾರ್ಥಿ ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕಲಂ 323, 324, 506,114 ಜೊತೆಗೆ 34 ಐಪಿಸಿ ಮತ್ತು ಕಲಂ 75 ರಂತೆ ಬಾಲನ್ಯಾಯ ಕಾಯಿದೆಯಡಿಯಲ್ಲಿ ಪ್ರಕರಣ ದಾಖಸಿಕೊಂಡು ಎಸ್ ಡಿ ಎಂ ಸಿ ಅಧ್ಯಕ್ಷ ಸೇರಿದಂತೆ ಶಿಕ್ಷಕರನ್ನು ಪೊಲೀಸರು ತನಿಖೆ ನಡೆಸುತಿದ್ದಾರೆ.

error: Content is protected !!