ಬೆಳ್ತಂಗಡಿ : ಅಧ್ಯಕ್ಷ ಮತ್ತು ಕಾರ್ಯದರ್ಶಿವರು ಸಂಘದಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ಮಲೆಬೆಟ್ಟು ಹಾಲು ಉತ್ಪಾದಕ ಸಹಕಾರಿ ಸಂಘದ ನಿರ್ದೇಶಕರು ಸಾಮೂಹಿಕ ರಾಜೀನಾಮೆ ನೀಡಲು ಮುಂದಾದ ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಮಲೆಬೆಟ್ಟು ಹಾಲು ಉತ್ಪಾದಕ ಸಹಕಾರಿ ಸಂಘ(ರಿ) ನ ಅಧ್ಯಕ್ಷ ಪ್ರಮೋದ್ ಕುಮಾರ್ ಮತ್ತು ಕಾರ್ಯದರ್ಶಿ ಜಯಶ್ರೀ ಮಾಡಿದ ಅವ್ಯವಹಾರದಿಂದ ಸಂಘದ ಸದಸ್ಯರು ಮತ್ತು ನಿರ್ದೇಶಕರ ನಡುವೆ ಭಿನ್ನಾಭಿಪ್ರಾಯದಿಂದ ಕಳೆದ ಮೂರು ತಿಂಗಳಿಂದ ಗಲಾಟೆ ನಡೆಯುತ್ತಿದ್ದು.ಮಲೆಬೆಟ್ಟು ಹಾಲು ಉತ್ಪಾದಕ ಸಹಕಾರಿ ಸಂಘದ ಡಿಪ್ಪೊ ಮುಂದೆ ಸುಮಾರು 70 ಜನ ಸದಸ್ಯರು ಇಂದು ಸೇರಿದ್ದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ಕಂಡಿತ್ತು. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಕೂಡ ದೌಡಾಯಿಸಿದ್ದರು. ಈ ವೇಳೆ ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನೇತೃತ್ವದಲ್ಲಿ ನಡೆದ ಆಡಳಿತ ಮಂಡಳಿ ಸಭೆ ನಡೆಸಿದ ಬಳಿಕ ಸದಸ್ಯರ ಒತ್ತಾಯಕ್ಕೆ ಮಣಿದು ಅಧ್ಯಕ್ಷ , ಉಪಾಧ್ಯಕ್ಷ ಸೇರಿ 13 ಮಂದಿ ನಿರ್ದೇಶಕರುಗಳು ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಅಧ್ಯಕ್ಷನಿಂದ ಜೀವಬೆದರಿಕೆ: ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷ ಪ್ರಮೋದ್ ಕುಮಾರ್ ಕೈ ತೋರಿಸಿ ಜೀವ ಬೆದರಿಕೆಯನ್ನು ನಿರ್ದೇಶಕರಾದ ಪುಷ್ಪರಾಜ್ ಗೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಪುಷ್ಪರಾಜ್ ಜೈನ್ ತಿಳಿಸಿದ್ದಾರೆ.
ರಾಜೀನಾಮೆ ನೀಡಿದ ನಿರ್ದೇಶಕರ ವಿವರ: ಮಲೆಬೆಟ್ಟು ಹಾಲು ಉತ್ಪಾದಕ ಸಹಕಾರಿ ಸಂಘ(ರಿ) ಇದರ ಅಧ್ಯಕ್ಷ ಪ್ರಮೋದ್ ಕುಮಾರ್ , ಉಪಾಧ್ಯಕ್ಷ ಗಂಗಯ್ಯ ಗೌಡ, ನಿರ್ದೇಶಕರುಗಳಾದ ಅಣ್ಣಿ ಪೂಜಾರಿ ಕಟ್ಟ, ಉದಯ ಕುಮಾರ್, ದಾಮೋದರ ಗೌಡ, ಪುಪ್ಪರಾಜ್ ಜೈನ್ ,ಶೇಷಪ್ಪ, ಚಿತ್ರಾ, ಲಕ್ಷ್ಮೀ ,ಪ್ರವೀಣ್ ಕುಮಾರ್ ಕಟ್ಟ, ಜಯಂತ ಗೌಡ, ಸಂಜೀವ ಮಲೆಕುಡಿಯ, ನಾರಾಯಣ ರಾಜಿನಾಮೆ ನೀಡಿದ್ದಾರೆ.
ಅಡಳಿತಾಧಿಕಾರಿ ನಿಯೋಜನೆ: ಆಡಳಿತ ಮಂಡಳಿ ಸಭೆ ಮೇಲಂತಬೆಟ್ಟು ಹಾಲು ಉತ್ಪಾದಕ ಸಹಕಾರಿ ಸಂಘದ ಕಚೇರಿಯಲ್ಲಿ ನ.29 ರಂದು ನಡೆಯಿತು. ಈ ವೇಳೆ ಸದಸ್ಯರ ಹಾಗೂ ನಿರ್ದೇಶಕರುಗಳ ನಡುವೆ ಭಿನ್ನಾಭಿಪ್ರಾಯ ಇತ್ತು ಇದರಿಂದ ಆಕ್ರೋಶಗಳು ಜಾಸ್ತಿಯಾಗಿತ್ತು. ಅವರ ಒಳಗಿನ ವ್ಯವಹಾರದಿಂದ ಬಗ್ಗೆ ಆಕ್ರೋಶ ಇತ್ತು ಹಾಗೂ ಆರೋಪಗಳು ಕೇಳಿಬಂದಿದ್ದು ಇದರಿಂದ ಅದ್ಯಕ್ಷ ,ಉಪಾಧ್ಯಕ್ಷರು ಸೇರಿ 13 ಮಂದಿ ಸಾಮೂಹಿಕ ರಾಜಿನಾಮೆ ನೀಡಿದ್ದಾರೆ. ಮುಂದೆ ಸಹಕಾರಿ ಕಾಯ್ದೆ ಪ್ರಕಾರ ಇಲ್ಲಿ ಆಡಳಿತಾಧಿಕಾರಿಯ ನೇಮಕ ಅಗುತ್ತೆ. 13 ಜನರ ರಾಜಿನಾಮೆ ಪತ್ರವನ್ನು ಒಂದು ತಿಂಗಳ ಕಾಲವಕಾಶದಲ್ಲಿ ಎ.ಆರ್ ಬಳಿ ಹೋಗಿ ರಾಜೀನಾಮೆ ಅಂಗೀಕಾರವಾಗಿ ಅಲ್ಲಿಂದ ಇಲ್ಲಿ ಆಡಳಿತಧಿಕಾರಿ ನಿಯೋಜನೆ ಬಳಿಕ ಮುಂದಕ್ಕೆ ಚುನಾವಣೆ ಕಾರ್ಯಗಳು ಒಂದು ಆರು ತಿಂಗಳ ನಂತರ ನಡೆಯುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಮಾಹಿತಿ ನೀಡಿದರು.