ನೆರಿಯ: ಆನೆ ದಾಳಿ ವೇಳೆ ಒಂದು ವರ್ಷದ ಮಗುವಿನ ಎಲುಬು ಮುರಿತ..!: ತಡವಾಗಿ ಬೆಳಕಿಗೆ ಬಂದ ಗಾಯ: ಮಗು ಆಸ್ಪತ್ರೆಗೆ ದಾಖಲು..!

ಬೆಳ್ತಂಗಡಿ : ನೆರಿಯ ಗ್ರಾಮದ ಬಯಲು ಎಂಬಲ್ಲಿ ಅಲ್ಟೋ ಕಾರಿನ ಮೇಲೆ ಆನೆ ದಾಳಿ ಮಾಡಿದ ಘಟನೆ ನ.27 ರಂದು ನಡೆದಿತ್ತು. ಈ ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿತ್ತು . ಆದರೆ ಕಾರಿನೊಳಗಿದ್ದ 1 ವರ್ಷದ ಮಗುವಿಗೂ ಗಂಭೀರ ಗಾಯವಾಗಿದೆ ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಆನೆ ದಾಳಿ ವೇಳೆ ಪುತ್ತೂರಿನ ಅಬ್ದುಲ್ ರಹಮಾನ್(40) ಮತ್ತು ನೆರಿಯದ ನಾಸಿಯಾ(30) ಇಬ್ಬರಿಗೆ ಗಾಯವಾಗಿತ್ತು. ಫಾತಿಮಾ ಅಲ್ಫಾ (1)ಗೆ ಕಾಡಾನೆ ದಾಳಿಯ ಸಂದರ್ಭದಲ್ಲಿ ತೊಡೆಯ ಭಾಗಕ್ಕೆ ಗಂಭೀರ ಗಾಯವಾಗಿ ಒಂದು ಎಲುಬು ಕಟ್ ಆಗಿದೆ ಎಂಬ ವಿಚಾರ ಮನೆಯವರಿಗೆ ತಡವಾಗಿ ತಿಳಿದಿದೆ. ಸದ್ಯ ಮಗುವನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಆನೆ ದಾಳಿಯಿಂದ ಗಾಯಗೊಂಡ ಮೂವರ ಬಗ್ಗೆ ನೆರಿಯ ಗ್ರಾಮದ ಡಿ.ಆರ್.ಎಫ್.ಓ ಯತೀಂದ್ರ ಮತ್ತು ತಂಡ ನ.28 ರಿಂದ ವರದಿಯನ್ನು ತಯಾರಿಸುತ್ತಿದ್ದು, ಈ ವರದಿಯನ್ನು ಅರಣ್ಯಾ ಇಲಾಖೆಯ ಮೇಲಾಧಿಕಾರಿಗಳಿಗೆ ಸಲ್ಲಿಸಿ ಬಳಿಕ ರಾಜ್ಯ ಸರಕಾರಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ನೀಡಿ ನಂತರ ಪರಿಹಾರ ಮೊತ್ತ ಸಿಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!