ಬೆಳ್ತಂಗಡಿ: ‘ಆಭರಣ’ ಚಿನ್ನದ ಮಳಿಗೆ ಮೇಲೆ ಅ.31ರಂದು ಐಟಿ ದಾಳಿ ನಡೆದಿದ್ದು, ಬೆಳ್ತಂಗಡಿಯ ಭರಣಿ ಕಟ್ಟದಲ್ಲಿರುವ ‘ಆಭರಣ ಜ್ಯುವೆಲ್ಲರ್ಸ್’ ಮೇಲಿನ ಪರಿಶೀಲನೆ 2ನೇ ದಿನವೂ ಮುಂದುವರಿದಿದೆ.
ನಿನ್ನೆ ಐಟಿ ತಂಡ ಮಳಿಗೆಯಲ್ಲಿ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ರಾತ್ರಿ ಮಳಿಗೆಗೆ 4 ಹೊಸ ಬೆಡ್ ಗಳನ್ನು ತರಿಸಿಕೊಂಡು, ‘ಆಭರಣ ಜ್ಯುವೆಲ್ಲರ್ಸ್’ ಶಾಪ್ ನ ಇಬ್ಬರು ಸಿಬ್ಬಂದಿಗಳೊಂದಿಗೆ ಇಬ್ಬರು ಐಟಿ ಅಧಿಕಾರಿಗಳು ಮಳಿಗೆಯಲ್ಲಿ ಉಳಿದುಕೊಂಡಿದ್ದರು.
ಇಂದು ಚಿನ್ನದ ಮಳಿಗೆಯನ್ನು ಬಂದ್ ಮಾಡಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಅಂಗಡಿ ಮುಂಭಾಗ ಲೆಕ್ಕ ಪರಿಶೋಧನೆ ನಡೆಯುತ್ತಿದೆ, ಹೀಗಾಗಿ ಇಂದು ವ್ಯವಹಾರ ಇರುವುದಿಲ್ಲ ಎಂದು ಬೋರ್ಡ್ ಹಾಕಲಾಗಿದೆ. ಅಂಗಡಿ ಮುಖ್ಯಸ್ಥರನ್ನು ಹಾಗೂ ಕೆಲಸಗಾರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಳ್ತಂಗಡಿ ಮಾತ್ರವಲ್ಲದೆ ಕರ್ನಾಟಕ ರಾಜ್ಯದ 14 ಶೋರೂಮ್‍ಗೆ ಹಾಗೂ ಗೋವಾದಲ್ಲಿರುವ ಒಂದು ‘ಆಭರಣ’ ಚಿನ್ನನ ಮಳಿಗೆಗೆ ಅ.31ರಂದು ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದರು.