ರಾಷ್ಟ್ರಮಟ್ಟದ ಕ್ರೀಡಾ ಸಾಧಕನಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ: ವಿದೇಶದಲ್ಲಿ ಭಾರತವನ್ನು ಪ್ರತಿನಿಧಿಸುವ ನಂಬರ್ ಒನ್ ಪ್ಲೇಯರ್: ‘ಏಷ್ಯಾದ ಬೆಸ್ಟ್ ಬ್ಲಾಕರ್’ ವಾಲಿಬಾಲ್ ಪ್ಲೇಯರ್ ಅಶ್ವಲ್ ರೈ ಬೆಳ್ತಂಗಡಿ

ಬೆಳ್ತಂಗಡಿ: ವಿದೇಶದಲ್ಲಿ ಭಾರತವನ್ನು ಪ್ರತಿನಿಧಿಸುವ ನಂಬರ್ ಒನ್ ಪ್ಲೇಯರ್ ಅಶ್ವಲ್ ರೈ ಬೆಳ್ತಂಗಡಿಯವರಿಗೆ ಈ ಬಾರಿ ಕ್ರೀಡಾ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ವಾಲಿಬಾಲ್ ಪಂದ್ಯಾಟದಲ್ಲಿ ‘ಏಷ್ಯಾದ ಬೆಸ್ಟ್ ಬ್ಲಾಕರ್’ ಎಂದೇ ಪ್ರಖ್ಯಾತಿ ಪಡೆದ ಅಶ್ವಲ್ ರೈ ಬೆಳ್ತಂಗಡಿ 2021 ಸೆಪ್ಟೆಂಬರ್ ನಲ್ಲಿ ಜಪಾನ್ನ ಟೋಕಿಯೋದಲ್ಲಿ ನಡೆದ ಏಷಿಯನ್ ಗೇಮ್ಸ್ ಚಾಂಪಿಯನ್‌ಶಿಪ್ ಪುರುಷರ ವಿಭಾಗದ ವಾಲಿಬಾಲ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದರು.


2023 ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ನಡೆದ ಎಷ್ಯಾನ್ ಗೇಮ್ಸ್ ನಲ್ಲಿ ಭಾರತದ ಪುರುಷರ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿ ಅಧ್ಬುತವಾದ ಸಾಧನೆಯನ್ನು ಮಾಡಿದ್ದಾರೆ.

IPL ಮಾದರಿಯಲ್ಲಿ ದೇಶದಲ್ಲಿ ನಡೆಯುವ ಜನಪ್ರಿಯ ವಾಲಿಬಾಲ್ ಲೀಗ್ ‘ಪ್ರೈಮ್ ವಾಲಿಬಾಲ್ ಲೀಗ್’ ಪಂದ್ಯದಲ್ಲಿ ಕೊಲ್ಕತ್ತ ತಂಡರ್ ಬೋಲ್ಟ್ ತಂಡದ ನಾಯಕನಾಗಿ ಒಂದು ಬಾರಿ ಚಾಂಪಿಯನ್, 2022ರಲ್ಲಿ ರನ್ನರ್ ಅಫ್ ಪ್ರಶಸ್ತಿ ಪಡೆದಿದ್ದಾರೆ.


ಸಂಜೀವ ರೈ ಮತ್ತು ವಾಣಿ ಎಸ್ ರೈ ಇವರ ಮಗನಾದ ಅಶ್ವಲ್ ರೈ, 2020 – 2021 ಸಾಲಿನಲ್ಲಿ ರಾಜ್ಯ ಸರಕಾರದಿಂದ ಏಕಲವ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಸದ್ಯ ಸೌತ್ ವೆಸ್ಟರ್ನ್ ರೈಲ್ವೆ ಇಲಾಖೆಯಲ್ಲಿ ವೃತ್ತಿ ಸಲ್ಲಿಸುತ್ತಿದ್ದಾರೆ.

error: Content is protected !!