ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜ್ ಉಜಿರೆ: ಉಡುಪಿ ಮತ್ತು ದಕ್ಷಿಣ ಕನ್ನಡ ಅಂತರ್ ಜಿಲ್ಲಾ ಪುರುಷರ ವಾಲಿಬಾಲ್ ಪಂದ್ಯಾಟ: ಕಾಲೇಜ್ ಮೈದಾನದಲ್ಲಿ ಸಮಾರೋಪ ಸಮಾರಂಭ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ವತಿಯಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಅಂತರ್ ಜಿಲ್ಲಾ ಪುರುಷರ ವಾಲಿಬಾಲ್ ಪಂದ್ಯಾಟದ ಸಮಾರೋಪ ಸಮಾರಂಭವು ಅ.05ರಂದು ಕಾಲೇಜ್ ಮೈದಾನದಲ್ಲಿ ನಡೆಯಿತು.

ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಸಂತೋಷ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಶಾಂತ್ ಜೈನ್ ಅಮೃತ್ ಟೆಕ್ಸ್ ಸ್ಟೈಲ್ ಉಜಿರೆ ಮತ್ತು ಸೋಮಶೇಖರ ಶೆಟ್ಟಿ ವಿಧ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಎಸ್.ಡಿ.ಎಂ ಎಜುಕೇಶನಲ್ ಸೊಸೈಟಿ ಉಜಿರೆ , ಎಸ್‌ಡಿ ಎಂ ವಾಲಿಬಾಲ್ ಕೋಚ್ ಮತ್ತು ದೈಹಿಕ ನಿರ್ದೇಶಕ ಸುದಿನ , ಕಾಲೇಜ್ ವ್ಯವಸ್ಥಾಪಕ ಚಂದ್ರನಾಥ್ ಜೈನ್, ದೈಹಿಕ ನಿರ್ದೇಶಕ ನಿತಿನ್ ಪೂಜಾರಿ ಉಪಸ್ಥಿತರಿದ್ದರು.

ಪಂದ್ಯಾಟದಲ್ಲಿ ಎನ್ ಆರ್ ಎ ಎಮ್ ಪಾಲಿಟೆಕ್ನಿಕ್ ನಿಟ್ಟೆ ಕಾಲೇಜ್ ಪ್ರಥಮ ಸ್ಥಾನವನ್ನು ಮತ್ತು ಎಸ್ ಎನ್ ಎಸ್ ಪಾಲಿಟೆಕ್ನಿಕ್ ಸುಂಕದಕಟ್ಟೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

error: Content is protected !!