ಆಕಸ್ಮಿಕವಾಗಿ ವ್ಯಕ್ತಿ ಮೇಲೆ ಬಿದ್ದ ಮರ: ಸ್ಥಳದಲ್ಲೇ ಸಾವನ್ನಪ್ಪಿದ ರಾಮಣ್ಣ ಗೌಡ

 

ಬೆಳ್ತಂಗಡಿ : ವ್ಯಕ್ತಿಯೊಬ್ಬರ ಮೇಲೆ ಮರ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೆ.23ರಂದು ನಿಡ್ಲೆ ಗ್ರಾಮದಲ್ಲಿ ನಡೆದಿದೆ.

ಮನೆಯ ಸಮೀಪದಲ್ಲಿದ್ದ ಮರವನ್ನು ಕಡಿಯುತ್ತಿರುವ ಸಂದರ್ಭದಲ್ಲಿ ಮಂಜಲಪಳಿಕೆ ನಿವಾಸಿ
ರಾಮಣ್ಣ ಗೌಡ (58) ಎಂಬವರ ಮೇಲೆ ಆಕಸ್ಮಿಕವಾಗಿ ಮರ ಬಿದ್ದಿದ್ದು ತೀವ್ರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಯಾವುದೇ
ಪ್ರಯೋಜವಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

error: Content is protected !!