ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ (ರಿ): 11 ವರ್ಷದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳ ಆಯೋಜನೆ: ವಿಶೇಷ ಆಕರ್ಷಣೆಯಾಗಿ ತುಳುಚಿತ್ರ ತಂಡ..!

ಬೆಳ್ತಂಗಡಿ: ಶ್ರೀ ಮನೋಜ್ ಕಟ್ಟೆಮಾರ್ ಧರ್ಮದರ್ಶಿಗಳು, ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮಾರ್ ಇವರ ಶುಭ ಆಶೀರ್ವಾದ ಮತ್ತು ದಿವ್ಯ ಉಪಸ್ಥಿತಿಯೊಂದಿಗೆ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ (ರಿ) ಇದರ 11 ವರ್ಷದ ಪ್ರಯುಕ್ತ , ರಾಜಕೇಸರಿ ಸಂಘಟನೆಯ  542ನೇ ಸೇವಾ ಯೋಜನೆಯ ಅಂಗವಾಗಿ ಅಕ್ಟೋಬರ್ 01ರಂದು ಜಿಲ್ಲೆಯ ವಿವಿಧ  11 ಅಶಕ್ತ ಆಶ್ರಮಗಳಿಗೆ ಅಕ್ಕಿ ವಿತರಣೆ, 11 ಅಶಕ್ತ ಬಡ ರೋಗಿಗಳಿಗೆ ವಸ್ತುಗಳ ವಿತರಣೆ, ಅರಣ್ಯ ಇಲಾಖೆ ಸಹಕಾರದೊಂದಿಗೆ 11 ವಿವಿಧ ಬಗೆಯ ಹಣ್ಣು ಹಂಪಲುಗಳ ಗಿಡಗಳ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜಕೇಸರಿ ಟ್ರಸ್ಟ್ ಸಂಸ್ಥಾಪಕ ದೀಪಕ್ ಜಿ  ಅವರು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 11-00ಗಂಟೆಗೆ ಅರುಣ್ ಕುಮಾರ್ ಪುತ್ತಿಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.‌ ಸಂದೀಪ್ ಬೆಳ್ತಂಗಡಿ ಅಧ್ಯಕ್ಷತೆಯಲ್ಲಿ ನಡೆಯುವ ಈ‌ ಕಾರ್ಯಕ್ರಮದಲ್ಲಿ
ಅತಿಥಿಗಳಾಗಿ ವಂ.ಫಾ. ವೊಲ್ಟರ್ ಡಿ’ಮೆಲ್ಲೊ, ಧರ್ಮಗುರುಗಳು ಮೊಸ್ಟ್ ಹೋಲಿ ರೆಡಿಮರ್ ಚರ್ಚ್, ಬೆಳ್ತಂಗಡಿ, ಜ| ಝಮೀರ್ ಸಅದಿ ಅಲ್ ಫಾಝಿಲ್ ಧರ್ಮಗುರುಗಳು, ಬಳಂಜ, ನಾಗೇಶ್ ಕದ್ರಿ ವೃತ ನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆ, ಹರಿಪ್ರಸಾದ್ ಉಪವಲಯ ಅರಣ್ಯಾಧಿಕಾರಿ ಉಜಿರೆ ಶಾಖೆ ಬೆಳ್ತಂಗಡಿ ವಲಯ, ರಾಜೇಶ್ ಕೋಟ್ಯಾನ್ ಮುಖ್ಯ ಅಧಿಕಾರಿಗಳು ಪಟ್ಟಣ ಪಂಚಾಯತ್ ಬೆಳ್ತಂಗಡಿ, ಮನೋಹರ್ ಬಳಂಜ ಪತ್ರಕರ್ತರು ಬೆಳ್ತಂಗಡಿ, ಅಜಯ್ ವ್ಯವಸ್ಥಾಪಕರು, ತಾಲೂಕು ಆಸ್ಪತ್ರೆ ಕಛೇರಿ, ಬೆಳ್ತಂಗಡಿ, ಪ್ರಶಾಂತ್ ಎಂ. ವಕೀಲರು ಭಾಗವಹಿಸಲಿದ್ದಾರೆ ಎಂದರು.

ವಿಶೇಷ ಆಕರ್ಷಣೆಯಾಗಿ ಮದಿಮಯೆ ತುಳು ಚಲನಚಿತ್ರ ತಂಡ ಜೊತೆಯಾಗಲಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬಾಲ ನಟನಾಗಿ ಟೋಬಿ ಚಲನಚಿತ್ರದಲ್ಲಿ ಮಿಂಚಿದ ಮಾತಿನ ಮಲ್ಲ ಅಮನ್ ಎಸ್.ಕರ್ಕೇರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ರಾಜಕೇಸರಿ ಟ್ರಸ್ಟ್  ನ ರೋಶನ್ ಸಿಕ್ವೇರ ಮಾತನಾಡಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್‌, ದ.ಕ ಜಿಲ್ಲೆ ಮಂಗಳೂರು ವಲಯ, ಅರಸು ಫ್ರೆಂಡ್ಸ್ ಬಳಗ ಮಂಗಳೂರು, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ದ.ಕ. ಜಿಲ್ಲಾ ಘಟಕ, ಅಳಕೆ ಫ್ರೆಂಡ್ಸ್, ಟ್ರಸ್ಟ್, ಮಂಗಳೂರು ಇದರ ನೇತೃತ್ವದಲ್ಲಿ  12 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಹಾಗೂ 3 ಬಡ ಕುಟುಂಬಗಳಿಗೆ ಮನೆ ಹಸ್ತಾಂತರ ಕಾರ್ಯಕ್ರಮವು ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜಕೇಸರಿ ಸಂಘಟನೆಯ ಪದಾಧಿಕಾರಿಗಳಾದ  ಶಶಿಕಾಂತ್, ಪ್ರಶಾಂತ್ , ಸಂದೀಪ್ ಉಪಸ್ಥಿತರಿದ್ದರು.

error: Content is protected !!