ಎಸ್ .ಡಿ.ಎಂ ಎಜುಕೇಷನ್‌ ಸೊಸೈಟಿಯ ಇಒ ಕುಸಿದು ಬಿದ್ದು ಸಾವು..!


ಉಜಿರೆ
: ಎಸ್ .ಡಿ.ಎಂ ಎಜುಕೇಷನ್‌ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಹರೀಶ್ (62) ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಸೆ.23ರಂದು ಸಂಭವಿಸಿದೆ.

ಸಂಸ್ಥೆಯಲ್ಲಿ ಕರ್ತವ್ಯದಲ್ಲಿರುವಾಗಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಎಸ್.ಡಿ.ಎಂ ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.

ಹೃದಯಾಘಾತದಿಂದ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ. ಕೆನರಾ ಬ್ಯಾಂಕಿನ ಸಿಬ್ಬಂದಿಯಾಗಿದ್ದ ಇವರು ಬಳಿಕ ಎಸ್.ಡಿ.ಎಂ ಟ್ರಸ್ಟ್ ನ ಕಾರ್ಯನಿರ್ವಹಣಾಧಿಕಾರಿ ವೃತ್ತಿ ಆರಂಭಿಸಿದರು. 2 ವರ್ಷದ ಪೂರ್ಣಾವಧಿ ಸಮೀಪಿಸುತ್ತಿರುವಾಗಲೇ ಇಹಲೋಕ ತ್ಯಜಿಸಿದ್ದಾರೆ.

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

 

error: Content is protected !!