ಸೌಜನ್ಯ ಒಂದು ಶಕ್ತಿ : ನ್ಯಾಯದ ಹೋರಾಟದ ಹಿಂದೆ ಸಮಾಜ ಮತ್ತು ಸ್ವಾಮೀಜಿ ಇರುತ್ತಾರೆ : ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ


ಬೆಳ್ತಂಗಡಿ: ಸತ್ಯ ನ್ಯಾಯ, ಧರ್ಮ ನಿಷ್ಠೆಯ ಪರ ಇರುವವರಿಗೆ ಜಯ ಇದ್ದೇ ಇದೇ, ಸೌಜನ್ಯ ಹೋರಾಟದ ಹಿಂದೆ ಮಠ ಇದೆ ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಹೇಳಿದರು.

ಕು. ಸೌಜನ್ಯಳ ಅತ್ಯಾಚಾರ, ಕೊಲೆ ಪ್ರಕರಣವನ್ನು ನ್ಯಾಯಾಂಗದ ಸುಪರ್ದಿಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಇಂದು ಬೆಳ್ತಂಗಡಿಯಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಸಂತೋಷ್ ರಾವ್ ನಿರಪರಾಧಿ ಎಂದಾದಮೇಲೆ ಬೇರೊಬ್ಬ ಅಪರಾಧಿ ಇದ್ದೇ ಇರುತ್ತಾನೆ, ನ್ಯಾಯಯುತ ತನಿಖೆ ಮೂಲಕ ಸೌಜನ್ಯ ಆತ್ಮಕ್ಕೆ ಶಾಂತಿ ಸಿಗುವಂತಾಗಲಿ, ಸತ್ಯ ನ್ಯಾಯದ ಪರ ಆದಿ ಚುಂಚನಗಿರಿ ಸದಾ ಇದೆ. ಸತ್ಯದ ಹೋರಾಟದಲ್ಲಿ ನಿರಂತರ ಉಳಿಪೆಟ್ಟು ತಿಂದು ಸತ್ಯದ ಹುಡುಕಾಟ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಯವರ ಹಿಂದೆ ಸಮಾಜ ಮತ್ತು ಸ್ವಾಮೀಜಿ ಇದ್ದಾರೆ. ಸ್ತ್ರೀಶಕ್ತಿ ಕಾಳಿ ಶಕ್ತಿ ಪಡೆದು ಸಮಾಜದಲ್ಲಿ ಅವಿರ್ಭವ ಮಾಡಿದೆ. ಸೌಜನ್ಯ ಒಂದು ಶಕ್ತಿ ಎಂದರು.

ಸರ್ಕಾರಕ್ಕೆ ಸ್ವಾಮೀಜಿ 3 ಆಗ್ರಹ

ಪ್ರಕರಣದಲ್ಲಿ ನಿರಪರಾಧಿ ಎಂದು ಸಾಭೀತಾಗಿರುವ ಸಂತೋಷ್ ರಾವ್ ಅವರ ಯವ್ವನ, ಜೀವನ ಎರಡೂ ಹಾಳಾಗಿದೆ. ಹೀಗಾಗಿ ಸಂತೋಷ್ ರಾವ್ ಅವರಿಗೆ ಸರಕಾರ ಸಹಾಯ ನೀಡಬೇಕು . ಕುಸುಮಾವತಿ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಮುಂದಿನ ತನಿಖೆಯ ಸಂದರ್ಭದಲ್ಲಿ ಈ ಪ್ರಕರಣವನ್ನು ಪ್ರಥಮವಾಗಿ ತನಿಖೆ ಮಾಡಿದ ತನಿಖಾಧಿಕಾರಿಗಳನ್ನು , ವೈದ್ಯರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಸರಕಾರವನ್ನು ಆಗ್ರಹಿಸಿದರು.

error: Content is protected !!