ಸೌಜನ್ಯ ಪ್ರಕರಣ: ಬೃಹತ್ ಪ್ರತಿಭಟನೆ : ಬೆಳ್ತಂಗಡಿ ಸಂಚಾರ ಇಂದು ಮಾರ್ಗ ಬದಲಾವಣೆ

ಬೆಳ್ತಂಗಡಿ: ಸೌಜನ್ಯ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆ.3ರಂದು ಬೆಳ್ತಂಗಡಿಯಲ್ಲಿ ನಡೆಯುವ ಪ್ರತಿಭಟನಾ ಸಭೆಗೆ ಬೆಳ್ತಂಗಡಿ ಪೇಟೆಯಲ್ಲಿ ಅತ್ಯಧಿಕ ಜನ ಸಂದಣಿಯಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ, ಈ ಸಮಯದಲ್ಲಿ ಬೆಳ್ತಂಗಡಿ ಪೇಟೆ ಮೂಲಕ ಹೋಗುವ ಕಡೂರು-ಬಂಟ್ವಾಳ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕೊಯ್ಯುರು ಕ್ರಾಸ್ ರಸ್ತೆಯ ಮೂಲಕ ಆದ್ರುಪೆರಾಲ್ ಮುಖಾಂತರ ಪರಪ್ಪು ಗೇರುಕಟ್ಟೆಯಾಗಿ ಮಂಗಳೂರು ಕಡೆಗೆ ಸಂಚರಿಸಲು ಹಾಗೆಯೇ ಮಂಗಳೂರಿನಿಂದ ಉಜಿರೆ ಕಡೆಗೆ ಬರುವ ಎಲ್ಲಾ ವಾಹನಗಳನ್ನು ಗುರುವಾಯನಕೆರೆಯಲ್ಲಿ, ಉಪ್ಪಿನಂಗಡಿ ರಸ್ತೆ ಮೂಲಕ ಪರಪ್ಪು ಕ್ರಾಸ್‌ನಲ್ಲಿ ಆದ್ರುಪೆರಾಲ್ ಮುಖಾಂತರ ಸಂಚರಿಸಲು ಮತ್ತು ಉಳಿದ ಸಣ್ಣ ವಾಹನಗಳನ್ನು ಚರ್ಚ್ ಕ್ರಾಸ್ ನಿಂದ ಕನ್ನಾಜೆ, ಪಡ್ಲಾಡಿ,ಲಾಯಿಲ ಮಾರ್ಗವಾಗಿ ಉಜಿರೆ ಕಡೆ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

error: Content is protected !!