ಬೆಳ್ತಂಗಡಿ : ಸುಸಜ್ಜಿತ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕಿನ ಬೆಳ್ತಂಗಡಿಯ ಕೇಂದ್ರ ಕಚೇರಿಯ ಎಟಿಎಂ ಹಾಗೂ ಲಿಫ್ಟ್ ಸೌಲಭ್ಯ ಆ.27ರಂದು ಪೂರ್ವಾಹ್ನ 11 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ನಿರ್ದೇಶಕ ನಿರಂಜನ್ ಬಾವಂತ ಬೆಟ್ಟು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಅಧ್ಯಕ್ಷ ಸಹಕಾರರತ್ನ ಡಾ. ಎಂ.ಎನ್.ರಾಜೇAದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಎಟಿಎಂನ್ನು ಹಾಗೂ ಎಂಎಲ್ ಸಿ ಹರೀಶ್ ಕುಮಾರ್ ಲಿಫ್ಟ್ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ. ಪ್ರಸ್ತುತ ಕೋಡಿಯಾಲ್ ಬೈಲ್, ಬಿಸಿ ರೋಡ್, ಕಂಕನಾಡಿ, ಬೆಳುವಾಯಿ ಮಣಿಪಾಲ,ಉಡುಪಿ, ಮಂಗಳೂರು ಮೊಬೈಲ್ ಬ್ಯಾಂಕ್, ಉಡುಪಿ ಮೊಬೈಲ್ ಬ್ಯಾಂಕ್, ಸಿದ್ಧಾಪುರ, ಪುತ್ತೂರು ಹೀಗೆ ಹತ್ತು ಕಡೆಗಳಲ್ಲಿ ಎಟಿಎಂ ಕಾರ್ಯ ನಿರ್ವಹಿಸುತ್ತಿದ್ದು, ಬೆಳ್ತಂಗಡಿಯಲ್ಲಿ ಹನ್ನೊಂದನೇ ಎಟಿಎಂ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು
ನಿರ್ದೇಶಕ ಶಶಿಕುಮಾರ್ ರೈ ಬಿ. ಎಸ್. ಮಾತನಾಡಿ ಸುದೀರ್ಘ ಇತಿಹಾಸವನ್ನು ಹೊಂದಿರುವ ಬ್ಯಾಂಕ್ ಸಹಕಾರಿ ಸಂಘದಲ್ಲಿ ವಿಶಿಷ್ಟ ನೂತನ ಬ್ಯಾಂಕಿAಗ್ ಸೇವೆಯನ್ನು ನಗರ ಹಾಗೂ ಗ್ರಾಮೀಣ ಜನರಿಗೆ ತನ್ನ ಶಾಖೆಗಳ ಮೂಲಕ ನೀಡುತ್ತಿರುವ ಜನಸಾಮಾನ್ಯರ ಬ್ಯಾಂಕ್ ಆಗಿ ಗುರುತಿಸಲ್ಪಟ್ಟಿದೆ. 19 ಬಾರಿ ಅಪೆಕ್ಸ್ ಪ್ರಶಸ್ತಿ ದೊರೆತಿರುವುದು ಬ್ಯಾಂಕಿನ ಕಾರ್ಯ ಸಾಧನೆಗೆ ಸಂದ ಪುರಸ್ಕಾರವಾಗಿದೆ ಸ್ವಸಹಾಯ ಗುಂಪುಗಳ ನಿರ್ವಹಣೆಗೆ 17 ಬಾರಿ ನಬಾರ್ಡ್ ಪ್ರಶಸ್ತಿ ಬ್ಯಾಂಕಿಗೆ ದೊರೆತಿದೆ. ರೈತರಿಗೆ ಕಿಸಾನ್ ಕ್ರೆಡಿಟ್ ಸೌಲಭ್ಯ, ಬ್ಯಾಂಕಿನ ಎಲ್ಲಾ ಶಾಖೆಗಳು ಕೋರ್ ಬ್ಯಾಂಕಿAಗ್, ಇಂಟರ್ನೆಟ್ ಸೌಲಭ್ಯ ಹೊಂದಿದ್ದು ಗ್ರಿಹಕರಿಗೆ ಉತ್ಕೃಷ್ಟವಾದ ಸೇವೆಯನ್ನು ನೀಡುತ್ತಿದೆ. ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಎನ್ನುವ ಆಶಯದೊಂದಿಗೆ ಮೊಬೈಲ್ ಬ್ಯಾಂಕಿAಗ್ ಕಾರ್ಯರೂಪಕ್ಕೆ ತಂದ ದೇಶದ ಮೊದಲ ಬ್ಯಾಂಕ್ ಎನ್ನುವ ಹೆಗ್ಗಳಿಕೆ ಹೊಂದಿದ್ದು, ಕಾಮನ್ ಸಾಫ್ಟ್ವೇರ್, ಎಟಿಎಂ ರಾಜ್ಯದಲ್ಲಿ ಪ್ರಥಮ ಬಾರಿಗೆ ತಂದ ಹೆಗ್ಗಳಿಕೆಗೆ ಪಾತ್ರವಾಗಿದೆ. 1994ರಿಂದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಸಮರ್ಥ ನಾಯಕತ್ವದಲ್ಲಿ 13,396 ಕೋಟಿ ರೂ. ಗಿಂತ ಅಧಿಕ ವ್ಯವಹಾರ ಹಾಗೂ ಎಂಬತ್ತಕ್ಕಿAತ ಅಧಿಕ ನೂತನ ಶಾಖೆಗಳನ್ನು ಆರಂಭಿಸಿದೆ ಎಂದು ಹೇಳಿದರು.
ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ಸುಧೀರ್ ಎಸ್ ಆರ್ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ಸಿರಾಜುದ್ದೀನ್ ವಂದಿಸಿದರು.