ತೆಕ್ಕಾರು: ಮನೆಗೆ ನುಗ್ಗಿದ ದುಷ್ಕರ್ಮಿಗಳ ಗುಂಪು : ಮಹಿಳೆಯ ಮಾನಭಂಗಕ್ಕೆ ಯತ್ನಿಸಿ ವಿಡಿಯೋ ರೆಕಾರ್ಡ್..! ಎಂಡೋಸಲ್ಫಾನ್ ಪೀಡಿತ ಮಗನ ಮೇಲೂ ಹಲ್ಲೆ..!

ತೆಕ್ಕಾರು: ಮನೆಗೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದುಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ತೆಕ್ಕಾರು ಗ್ರಾಮದಲ್ಲಿ ನಡೆದಿದೆ.

ಆ.24 ರ ಸಂಜೆ 4.30ರ ವೇಳೆಗೆ  6 ಮಂದಿಯ ಗುಂಪು ಪಿಂಡಿಕಲ್ಲು ಎಂಬಲ್ಲಿನ ಮನೆಯೊಂದರೊಳಗೆ ಮಾರಕಾಸ್ತ್ರದೊಂದಿಗೆ ಅಕ್ರಮ ಪ್ರವೇಶ ಮಾಡಿದ್ದು ಈ ವೇಳೆ ಮನೆಯಲ್ಲಿದ್ದ ಮಹಿಳೆ ಬೊಬ್ಬೆ ಹಾಕಿದ್ದಾರೆ. ಆಗ ದುಷ್ಕರ್ಮಿಗಳ ಗುಂಪು ಮಹಿಳೆ ಧರಿಸಿದ ಬಟ್ಟೆಯನ್ನು ಹರಿಯಲು ಯತ್ನಿಸಿದ್ದಾರೆ. ಅಲ್ಲದೆ ಒಬ್ಬಾತ ವೀಡಿಯೋ ರೆಕಾರ್ಡ್ ಮಾಡಿ ಮಹಿಳೆಯ ಪೋಟೋ, ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತೇನೆ ಎಂದು ಬೆದರಿಸಿದ್ದಾನೆ. ಈ ವೇಳೆ ಮಧ್ಯೆ ಪ್ರವೇಶಿಸಿ ಹಲ್ಲೆಯನ್ನು ತಡೆಯಲು ಮುಂದಾದ ಎಂಡೋಸಲ್ಫಾನ್ ಪೀಡಿತ ಮಗನ ಮೇಲೂ ಗುಂಪು ಮನಬಂದಂತೆ ಥಳಿಸಿದೆ.

ಘಟನೆಯ ಬಗ್ಗೆ ಮಹಿಳೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಂತ್ರಸ್ತ ಮಹಿಳೆ ಹಾಗೂ ಹಲ್ಲೆಗೊಳಗಾದ ಮಗ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

error: Content is protected !!