ಧರ್ಮಸ್ಥಳ – ನಾರಾವಿ ಸರ್ಕಾರಿ ಬಸ್ ತಡೆ..! : ರಾಜ್ಯ ಸರ್ಕಾರದ ನಡೆ ಖಂಡಿಸಿ ವಿದ್ಯಾರ್ಥಿ ಪರಿಷತ್ ಬೃಹತ್ ಪ್ರತಿಭಟನೆ..!


ಬೆಳ್ತಂಗಡಿ:
ಧರ್ಮಸ್ಥಳದಿಂದ ನಾರಾವಿಗೆ ಸರ್ಕಾರಿ ಬಸ್ ಇವತ್ತಿನಿಂದ (ಆ.25) ಪ್ರಾರಂಭಗೊಳ್ಳುವ ಬಗ್ಗೆ ಕೆಎಸ್‌ಆರ್‌ಟಿಸಿ ಕಳೆದ ಎರಡು ದಿನಗಳ ಹಿಂದೆ ಪ್ರಕಟಣೆ ಹೊರಡಿಸಿತ್ತು. ಆದರೆ ಬಸ್ ಸಂಚಾರಕ್ಕೆ ತಡೆ ಒಡ್ಡಲಾಗಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿ ಪರಿಷತ್ ಇಂದು ಪ್ರತಿಭಟನೆ ನಡೆಸಲು ಸಜ್ಜಾಗಿದೆ.

ಹಲವಾರು ವರ್ಷಗಳ ಬೇಡಿಕೆಯಂತೆ ಕೆಎಸ್‌ಆರ್‌ಟಿಸಿ ಧರ್ಮಸ್ಥಳ – ನಾರಾವಿಗೆ ಸರ್ಕಾರಿ ಬಸ್ ಸಂಚಾರಕ್ಕೆ ಅನುಮತಿ ನೀಡಿ, ಸಂಚಾರಕ್ಕೆ ಸಮಯವನ್ನೂ ನಿಗದಿ ಪಡಿಸಿದ ಪ್ರಕಟಣೆ ಹೊರಡಿಸಿತ್ತು. ಹೀಗಾಗಿ ಆ ಭಾಗದ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದರು. ಆದರೆ ಇವತ್ತು ಏಕಾಏಕಿ ಬಸ್ ಸೇವೆ ಮುಂದೂಡಲಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಿಂದ ಸ್ಥಳೀಯರು ಸೇರಿದಂತೆ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ. ಅದಲ್ಲದೇ ರಾಜಕೀಯ ಉದ್ದೇಶದಿಂದ ಬಸ್ ತಡೆ ಹಿಡಿಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.

ಈ ಬಗ್ಗೆ ಇಂದು ಸಂಜೆ 3 ಗಂಟೆಗೆ ಸರ್ಕಾರಿ ಬಸ್ ತಡೆ ಹಿಡಿದಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೃಹತ್ ಪ್ರತಿಭಟನೆಯನ್ನು ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ಆಯೋಜಿಸಿದೆ.

error: Content is protected !!