ಧರ್ಮಸ್ಥಳ, ನಾರಾವಿ ಬಸ್ ಸಂಚಾರಕ್ಕೆ ರಾಜಕೀಯ ತಡೆ..? : ಇಂದಿನಿಂದ ಪ್ರಾರಂಭವಾಗಬೇಕಿದ್ದ ಸಂಚಾರ ಮುಂದೂಡಿಕೆ..?

 

 

ಬೆಳ್ತಂಗಡಿ: ಧರ್ಮಸ್ಥಳದಿಂದ ನಾರಾವಿಗೆ ಕೆಎಸ್ ಆರ್ ಟಿ ಸಿ ಬಸ್ ಸಂಚಾರವನ್ನು ಮುಂದೂಡಲಾಗಿದೆ.
ಕಳೆದ ಹಲವಾರು ವರ್ಷಗಳಿಂದ ನಾರಾವಿಗೆ ಸರ್ಕಾರಿ ಬಸ್ ಸಂಚಾರಕ್ಕಾಗಿ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಹಲವಾರೂ ಮಂದಿ ಶಾಸಕರು ಸೇರಿದಂತೆ ವಿವಿಧ ರೀತಿಯಲ್ಲಿ ಮನವಿಯ ಮೂಲಕ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಧರ್ಮಸ್ಥಳದಿಂದ ನಾರಾವಿಗೆ ಬಸ್ ಸಂಚಾರ ಆಗಸ್ಟ್ 25 ಶುಕ್ರವಾರ ಬೆಳಗ್ಗೆ ಪ್ರಾರಂಭವಾಗಲಿದೆ ಎಂಬ ಬಗ್ಗೆ ಕೆ ಎಸ್ ಆರ್ ಟಿಸಿ ಮಾಹಿತಿ ನೀಡಿತ್ತು. ಇದರಿಂದಾಗಿ ಆ ಭಾಗದ ಜನರು ಕೊನೆಗೂ ನಮ್ಮೂರಿಗೆ ಸರ್ಕಾರಿ ಬಸ್ ಬರುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಬಸ್ ಸ್ವಾಗತಿಸಲು ಅಣಿಯಾಗಿದ್ದರು. ಅದರೆ ಈಗ ಅವರಿಗೆ ನಿರಾಸೆ ಕಾದಿದೆ. ಕಾರಣ ಬಸ್ ಸಂಚಾರ ಮುಂದೂಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಬಸ್ ಸಂಚಾರ ಮುಂದೂಡಲು ಬೆಳ್ತಂಗಡಿಯ ರಾಜಕೀಯ ತಡೆ ಕಾರಣ ಎಂಬ ತಿಳಿದು ಬಂದಿದೆ. ಕಳೆದ ಎರಡು ದಿನಗಳ ಹಿಂದೆ ಕೆಎಸ್ ಆರ್ ಟಿಸಿ ಧರ್ಮಸ್ಥಳದಿಂದ ನಾರಾವಿಗೆ ಸಂಚಾರಿಸುವ ಬಸ್ ಸಮಯದ ಅಧಿಕೃತ ಪಟ್ಟಿಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರ ಕೋರಿಕೆಯ ಮೇರೆಗೆ ಎಂದು ನಮೂದಿಸಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಶಾಸಕ ಹರೀಶ್ ಪೂಂಜರ ಹೆಸರಲ್ಲಿ ಅಭಿನಂದನೆಗಳ ಪೋಸ್ಟರ್ ಗಳು ಹರಿದಾಡುತಿತ್ತು. ಅದರೆ ಇದು ಶಾಸಕರ ಪ್ರಯತ್ನದಿಂದ ಅಲ್ಲ ಮಾಜಿ ಶಾಸಕ ವಸಂತ ಬಂಗೇರ ಅವರು ಕಳೆದ ಒಂದು ತಿಂಗಳ ಹಿಂದೆ ಸ್ಥಳೀಯರು ನೀಡಿದ ಮನವಿಯಂತೆ ಸಾರಿಗೆ ಸಚಿವರನ್ನು ಭೇಟಿ ಮಾಡಿ  ಬಸ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯ ಮಾಡಿದ್ದರಿಂದಾಗಿ  ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಕಳೆದ 5 ವರ್ಷಗಳಲ್ಲಿ ಶಾಸಕರು ಯಾಕೆ ಬಸ್ ವ್ಯವಸ್ಥೆ ಮಾಡಿಲ್ಲ  ಎಂಬ  ಸಂದೇಶಗಳು ಮನವಿ ಪತ್ರದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಎಲ್ಲ ಗೊಂದಲಗಳಿಂದಾಗಿ ಬಸ್ ಸಂಚಾರಕ್ಕೆ ರಾಜಕೀಯ ವಿಘ್ನ ಉಂಟಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಇದರಿಂದಾಗಿ ಬಸ್ ಸಂಚಾರ ಮುಂದೂಡಲಾಗಿದೆ.ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಈ ಬಸ್ ಸೇವೆಗೆ ಸದ್ಯದಲ್ಲೇ   ಚಾಲನೆ ನೀಡಲಿರುವ ಬಗ್ಗೆ ಮಾಹಿತಿ ಪ್ರಜಾಪ್ರಕಾಶ ನ್ಯೂಸ್ ಗೆ  ಲಭ್ಯವಾಗಿದೆ.

 

ಇದನ್ನೂ ಓದಿ:

ಬೆಳ್ತಂಗಡಿ ಶಾಸಕರ ಮನವಿಗೆ ಸ್ಪಂದಿಸಿದ ಕೆಎಸ್‌ಆರ್‌ಟಿಸಿ: ಆ.25 ಶುಕ್ರವಾರ ಧರ್ಮಸ್ಥಳದಿಂದ ನಾರಾವಿಗೆ ಸರ್ಕಾರಿ ಬಸ್ ಪ್ರಾರಂಭ: ಶಕ್ತಿ ಯೋಜನೆಗೆ ಮತ್ತಷ್ಟು ಬಲ ತುಂಬಿದ ಸರ್ಕಾರ

 

 

 

error: Content is protected !!