ಉಜಿರೆ: ಹಕ್ಕೊತ್ತಾಯ ಸಭೆಯಲ್ಲಿ ಕುಟುಂಬದ ಮೇಲೆ ಹಲ್ಲೆಗೆ ಯತ್ನ: ಬೆಳ್ತಂಗಡಿ ಠಾಣೆಗೆ ದೂರು ನೀಡಿದ ಸೌಜನ್ಯ ತಾಯಿ ಕುಸುಮಾವತಿ

ಬೆಳ್ತಂಗಡಿ :ಉಜಿರೆಯಲ್ಲಿ ಆ. 04 ರಂದು ನಡೆದ ಹಕ್ಕೊತ್ತಾಯ ಸಭೆಯಲ್ಲಿ ವ್ಯಕ್ತಿಯೊಬ್ಬರು ಇತರರೊಂದಿಗೆ ಸೇರಿ ತನ್ನ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕುಸುಮಾವತಿ ಪಾಂಗಾಳ ಅವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.

ತನ್ನ ಮಗಳು ಕುಮಾರಿ ಸೌಜನ್ಯ ಸುಮಾರು 11 ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದು ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸುವಂತೆ ಕಳೆದ 11 ವರ್ಷಗಳಿಂದ ಹೋರಾಟ ನಡೆಸುತಿದ್ದು ಅದೇ ಉದ್ದೇಶದಿಂದ ಆ. 04 ರಂದು ಉಜಿರೆಯಲ್ಲಿ ನಡೆದ ಸಭೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಸಭೆಗೆ ನಾನು ನನ್ನ ಮಕ್ಕಳು ಸೇರಿದಂತೆ ಕುಟುಂಬದೊಂದಿಗೆ ಬಂದಿದ್ದು ಈ ವೇಳೆ ವ್ಯಕ್ತಿಯೊಬ್ಬ ಇತರರೊಂದಿಗೆ ಸೇರಿಕೊಂಡು ನನ್ನನ್ನು ತಡೆದು ನಿಲ್ಲಿಸಿ ನನ್ನ ಚೂಡಿದಾರದ ವೇಲನ್ನು ಹಿಡಿದೆಳೆದದ್ದಲ್ಲದೇ ತನ್ನ ಮಗನ ಮೇಲೆ ಹಲ್ಲೆಗೈದಿದ್ದಾರೆ.

ಈ ಬಗ್ಗೆ ಅರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.

error: Content is protected !!