ರಾಜಕೇಸರಿ ಸಂಘಟನೆಯಿಂದ 539ನೇ ಸೇವಾ ಯೋಜನೆ: ಸೋಮವತಿ ನದಿ ಸೇತುವೆಯ ಸುತ್ತಮುತ್ತ ಸ್ವಚ್ಛತಾ ಕಾರ್ಯ

ಬೆಳ್ತಂಗಡಿ: ಹಲವಾರು ಸಮಾಜಮುಖಿ ಕೆಲಸಗಳಿಂದ ಸದಾ ಜನ ಮೆಚ್ಚುಗೆ ಪಡೆದುಕೊಂಡಿರುವ ಬೆಳ್ತಂಗಡಿಯ ರಾಜಕೇಸರಿ ಸಂಸ್ಥೆಯ ಸದಸ್ಯರಿಂದ ರಾಷ್ಟ್ರೀಯ ಹೆದ್ದಾರಿಯ ಸೋಮವತಿ ನದಿಯ ಸೇತುವೆ ಸೇರಿದಂತೆ ಸುತ್ತಮುತ್ತ ಸ್ವಚ್ಚತಾ ಕಾರ್ಯ ನಡೆಯಿತು.

ಮಳೆಗಾಲದಲ್ಲಿ ಸೇತುವೆಯಲ್ಲಿ ನೀರು ನಿಂತು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ನಡೆದುಕೊಂಡು ಹೋಗಲು ಸಮಸ್ಯೆಯಾಗುತ್ತಿರುವ ಬಗ್ಗೆ ಅರಿತ್ತಿದ್ದ ರಾಜಕೇಸರಿ ಸಂಘಟನೆಯ ಗೌರವ ಸದಸ್ಯ ಪ್ರೇಮ್ ರಾಜ್ ರೋಷನ್ ಇವರು ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 539 ನೇ ಸೇವಾ ಯೋಜನೆಯು ಶ್ರಮದಾನ ಮಾಡುವ ಮೂಲಕ ಸೇತುವೆಯಲ್ಲಿ ಸಂಗ್ರಹವಾದ ಮರಳು ಕಸ ಕಡ್ಡಿ ಮಣ್ಣು ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಈ ವೇಳೆ ಸಾರ್ವಜನಿಕರು ರಾಜಕೇಸರಿ ಸಂಘಟನೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರಮದಾನದಲ್ಲಿ ಸುರೇಶ್ ಶೆಟ್ಟಿ ಲಾಯಿಲ, ರಾಜಕೇಸರಿ ಅಧ್ಯಕ್ಷ ಸಂದೀಪ್, ಸದಸ್ಯರುಗಳಾದ ಶಶಿಕಾಂತ್, ರಾಮಣ್ಣ, ಗಣೇಶ್, ಕಿರಣ್, ಗಣೇಶ, ಅಭಿಷೇಕ್, ಹರೀಶ್, ಕಿಶನ್, ಭರತ್, ಗಣೇಶ್ ಹಾಗೂ ಇತರರು ಭಾಗಿಯಾಗಿದ್ದರು.

error: Content is protected !!