ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ : ಕಿರುಕುಳ ವೇಳೆ ರಿಕ್ಷಾದಿಂದ ಜಿಗಿದ ಬಾಲಕಿ: ಆಟೋ ಚಾಲಕ ಸೇರಿದಂತೆ ಇಬ್ಬರ ಬಂಧನ

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಆಟೋ ರಿಕ್ಷಾದಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಜೂ 18 ರಂದು ಬೆಳಿಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದಲಿತ ಬಾಲಕಿಯೊಬ್ಬಳು ನಡೆದುಕೊಂಡು ಹೋಗುತ್ತಿರುವ ವೇಳೆ ಸಾಧಿಕ್ ಎಂಬಾತ ಚಲಾಯಿಸುತಿದ್ದ ಆಟೋ ರಿಕ್ಷಾದಲ್ಲಿ ಸಂಚಾರಿಸುತಿದ್ದ ಕರೀಂ ಎಂಬಾತ ಒತ್ತಾಯಪೂರ್ವಕವಾಗಿ ರಿಕ್ಷಾದಲ್ಲಿ ಕುಳ್ಳಿರಿಸಿ ಹಣದ ಆಮಿಷ ಒಡ್ಡಿದ್ದಾನೆ. ಅದರೆ ಬಾಲಕಿ ಅದನ್ನು ತಿರಸ್ಕರಿಸಿದ್ದಾಳೆ. ನಂತರ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಲಾಗಿದೆ. ಈ ಸಂದರ್ಭದಲ್ಲಿ ಬಾಲಕಿ ಹೆದರಿ ರಿಕ್ಷಾದಿಂದ ಹೊರಗೆ ಜಿಗಿದಾಗ ಅವಳ ಕೈ .ಕಾಲು ಸೇರಿದಂತೆ ಹಣೆಗೆ ಗಾಯಗಳಾಗಿದ್ದು ಆಟೋ ನಿಲ್ಲಿಸದೇ ಆರೋಪಿಗಳು ಪರಾರಿಯಾಗಿದ್ದರು.ಈ ವೇಳೆ ರಸ್ತೆಯಲ್ಲಿ ಬರುತಿದ್ದ ವ್ಯಕ್ತಿಯೊಬ್ಬರು ಗಾಯವಾಗಿದ್ದ ಬಾಲಕಿಯನ್ನು ಉಪಚರಿಸಿ ಮನೆಯವರಿಗೆ ವಿಚಾರ ತಿಳಿಸಿದ್ದು ನಂತರ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ರಿಕ್ಷಾದಲ್ಲಿದ್ದ ಕರೀಂ ಮತ್ತು ಚಾಲಕ ಸಾಧಿಕ್ ಎಂಬವರ ಮೇಲೆ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.

error: Content is protected !!