ಉಳ್ಳಾಲ: ಮನೆಯೊಂದಕ್ಕೆ 7 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಕೊಟ್ಟು ಮನೆಮಂದಿಂಗೆ ಶಾಕ್ ನೀಡಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಉಳ್ಳಾಲಬೈಲ್ ನಿವಾಸಿ ಸದಾಶಿವ ಆಚಾರ್ಯ ಎಂಬವರ ಮನೆಗೆ ನೀಡಲಾದ ವಿದ್ಯುತ್ ಬಿಲ್‌ನಲ್ಲಿ 99,338 ಯೂನಿಟ್ ವಿದ್ಯುತ್ ಖರ್ಚಾಗಿದ್ದು 7,71,072 ರೂಪಾಯಿ ಬಿಲ್ ಎಂದು ನಮೂದಿಸಲಾಗಿದೆ. ಬಿಲ್ ಕಂಡ ಮನೆ ಮಾಲೀಕರು ದಂಗಾಗಿದ್ದಾರೆ.
ಈ ಮೊದಲ ಮನೆಗೆ ಕೇವಲ 3,000 ರೂಪಾಯಿಯಷ್ಟು ಮಾಸಿಕ ವಿದ್ಯುತ್ ಬಿಲ್ ಬರುತ್ತಿತ್ತು. ಅದಲ್ಲದೆ ಇವರು ಪ್ರತಿ ತಿಂಗಳು ತಪ್ಪದೇ ಬಿಲ್ ಕಟ್ಟುತ್ತಿದ್ದರು. ಆದರೂ ಈ ತಿಂಗಳು ಮಾತ್ರ ಬರೊಬ್ಬರಿ 7,71,072 ರೂಪಾಯಿ ಬಿಲ್ ಬಂದಿದೆ. ಬಿಲ್ ಬಗ್ಗೆ ಸಿಬ್ಬಂದಿಯಲ್ಲಿ ಕೇಳಿದ್ದಕ್ಕೆ ಕಚೇರಿಗೆ ತೆರಳಿ ವಿಚಾರಿಸುವಂತೆ ಸದಾಶಿವ ಆಚಾರ್ಯ ಅವರಿಗೆ ತಿಳಿಸಿದ್ದಾರೆ.
ಬಳಿಕ ಕಚೇರಿಯಲ್ಲಿ ವಿಚಾರಿಸಿದಾಗ, ಬಿಲ್ ರೀಡರ್‌ನ ಎಡವಟ್ಟಿನಿಂದಾಗಿ ತಪ್ಪಾಗಿ ವಿದ್ಯುತ್ ಬಿಲ್ ಮುದ್ರಣವಾಗಿದೆ ಎಂದು ತಿಳಿದು ಬಂದಿದೆ. ತಕ್ಷಣವೇ ಸದಾಶಿವ ಆಚಾರ್ಯ ಅವರ ಮನೆಗೆ 2,833 ರೂಪಾಯಿಗಳ ಪರಿಷ್ಕೃತ ವಿದ್ಯುತ್ ಬಿಲ್ ಅನ್ನು ತಲುಪಿಸಲಾಗಿದೆ