‘ಚುನಾವಣೆ ಬಂದಾಗ ಹರೀಶ್ ಪೂಂಜ ಕ್ರೈಸ್ತ, ಮುಸ್ಲಿಂ ಮತಗಳ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಾರೆ: ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂಗೆ ಗೆಲುವು ಖಚಿತ: ರಾಜ್ಯದಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ’ : ಐವನ್ ಡಿ ಸೋಜ

ಬೆಳ್ತಂಗಡಿ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲಾ ವರ್ಗದವರ ಹಿತ ಕಾಪಾಡುವ ಡಬಲ್ ಇಂಜಿನ್ ಸರಕಾರ ಒಂದೇ ಒಂದು ಅಲ್ಪಸಂಖ್ಯಾತರಿಗೆ ಸ್ಪರ್ಧೆ ಮಾಡಲು ಸೀಟ್ ಕೊಟ್ಟಿಲ್ಲ. ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಸಮುದಾಯದ ಜನರ ಬಳಿ ಮತ ಹಾಕಿ ಎಂದು ಹೇಳುವಾಗ ಆ ಸಮುದಾಯಕ್ಕೆ ಬಿಜೆಪಿಯವರು ಪ್ರತಿನಿಧಿತ್ವ ಕೊಟ್ಟಿಲ್ಲ ಅನ್ನೊ ಕನಿಷ್ಠ ಜ್ಞಾನ ಇಲ್ಲ. ಇದು ಬೇಸರ ಸಂಗತಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ ಸೋಜ ವರು  ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಂಗಳೂರಿನಲ್ಲಿ ಬಿಜೆಪಿ ಶಾಸಕರು ಮನೆ ಮನೆಗೆ ಪತ್ರ ಕಳಿಸುತ್ತಾರೆ. ನಾವು ಚರ್ಚ್ ಅಭಿವೃದ್ಧಿಗೆ ಹಣ ಕೊಟ್ಟಿದ್ದೇವೆ ಮತ ಹಾಕಿ, ವಕ್ಫ್ ಮಂಡಳಿಗೆ ಹಣ ಕೊಟ್ಟಿದ್ದೇವೆ ಮತ ಹಾಕಿ ಅಂತಾರೆ. ಕ್ರೈಸ್ತರಿಗೆ ಜಾಗ ಮಾರಾಟ ಮಾಡಬೇಡಿ, ಮುಸ್ಲಿಂ ಮತ ಬೇಡ, ಮದರ್ ತೆರೇಸಾ ಮತಾಂತರ ಮಾಡುವ ಹೆಂಗಸು ಎಂದು ಹರೀಶ್ ಪೂಂಜ ಹೇಳಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಮುದ್ರಿತವಾಗಿದೆ. ಚುನಾವಣೆ ಬಂದಾಗ ಹರೀಶ್ ಪೂಂಜ ಆ ಸಮುದಾಯದ ಮತಗಳ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಾರೆ. ಇದು ಆ ಸಮಾಜದ ಬಗ್ಗೆ ಇರುವ ಪ್ರೀತಿ ವಿಶ್ವಾಸ ಕಾಳಜಿ ಅಲ್ಲ. ಇಂತಹವರನ್ನು ಸಮಾಜದಲ್ಲಿ ತಿರಸ್ಕಾರ ಮಾಡಬೇಕು. ಯಾವುದೇ ಸ್ಥಾನ ಕೊಡಲು ಸಮಾಜ ಮುಂದೆ ಬರಬಾರದು ಎಂದರು.

ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ಪರ ಮಾತನಾಡಿ, ಬೆಳ್ತಂಗಡಿಯ ಅನೇಕ ಭಾಗಗಳಿಗೆ ಸುತ್ತಾಡಿದ್ದೇನೆ. ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ ಅವರಿಗೆ ಖಂಡಿತ ಗೆಲುವು ಸಿಗುತ್ತದೆ ಎಂದು ದೈರ್ಯದಿಂದ ಹೇಳುತ್ತೇನೆ. ಮತದಾರರು ಮೇ 10ರಂದು ಕಾಂಗ್ರೆಸ್ ಪಕ್ಷದ ಪರ ಮತ ಚಾಲಾಯಿಸಲಿದ್ದಾರೆ. ರಾಜ್ಯದಲ್ಲೂ ಬಹಳ ಸ್ಪಷ್ಟವಾಗಿ ಕಾಂಗ್ರೆಸ್ ಗೆಲ್ಲುತ್ತದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು

error: Content is protected !!