ಬೆಳ್ತಂಗಡಿ: ಜಾಗದ ವಿವಾದಕ್ಕೆ ಸಂಬಂಧಪಟ್ಟಂತೆ ಮೇಲಂತಬೆಟ್ಟು ಭಗವತಿ ದೇವಸ್ಥಾನಕ್ಕೆ ತೆರಳುವ ರಸ್ತೆಗೆ ಸ್ಥಳೀಯ ವ್ಯಕ್ತಿಯೊಬ್ಬರು ಗೇಟ್ ಅಳವಡಿಸಿ ಬೀಗ ಹಾಕಿದ ಘಟನೆ ಎ 02 ರಂದು ಬೆಳಿಗ್ಗೆ ನಡೆದಿದೆ.
ಬೆಳ್ತಂಗಡಿ ತಾಲೂಕು ಮೇಲಂತಬೆಟ್ಟು ಗ್ರಾಮದ ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಮಾ 03 ರಿಂದ ಆರಂಭಗೊಂಡಿದ್ದು ದೇವಸ್ಥಾನಕ್ಕೆ ಬರುವ ರಸ್ತೆಯ ದುರಸ್ತಿ ಕೆಲಸ ಮಾಡಿಸುವಂತೆ ಪಂಚಾಯತ್ ಗೆ ಮನವಿಯನ್ನು ದೇವಸ್ಥಾನದ ವತಿಯಿಂದ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎ 02 ರಂದು ಸಂಜೆ ಜೆಸಿಬಿ ಮೂಲಕ ದುರಸ್ತಿ ಕೆಲಸ ನಡೆಯುತ್ತಿರುವ ಸಂದರ್ಭದಲ್ಲಿ ನೂಜೋಡಿ ಕ್ರಾಸ್ ಬಳಿ ಸ್ಥಳೀಯ ನಿವಾಸಿಯೊಬ್ಬರು ಬಂದು ಅದು ಖಾಸಗಿ ಜಾಗ ಜೆಸಿಬಿ ಕೆಲಸ ಬಗ್ಗೆ ನನ್ನ ಗಮನಕ್ಕೆ ಬರಲಿಲ್ಲ.ಅದಲ್ಲದೇ ರಬ್ಬರ್ ಗಿಡಗಳಿಗೆ ಹಾನಿ ಮಾಡಿದ್ದು ಕೆಲಸ ನಿಲ್ಲಿಸುವಂತೆ ಸೂಚಿಸಿದರೆನ್ನಲಾಗಿದ್ದು ಈ ವೇಳೆ ಇತ್ತಂಡಗಳಿಗೆ ಮಾತಿನ ಚಕಮಕಿ ನಡೆದಿದೆ.ಜೆಸಿಬಿ ಕೆಲಸ ನಿಲ್ಲಿಸಿ ತೆರಳಿತ್ತು ಎನ್ನಲಾಗಿದೆ. ಅದರೆ ಇವತ್ತು ಬೆಳಿಗ್ಗೆ ರಸ್ತೆಗೆ ಅಡ್ಡಲಾಗಿ ಗೇಟ್ ಅಳವಡಿಸಿ ಬೀಗ ಹಾಕಿದ್ದರು. ಇವತ್ತಿನಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ದೇವಸ್ಥಾನದಲ್ಲಿ ಪ್ರಾರಂಭಗೊಂಡಿದ್ದು ಸಂಚಾರಕ್ಕೆ ತಡೆ ಉಂಟಾಗಿದೆ. ತಕ್ಷಣ ಪಂಚಾಯತ್ ಗೆ ದೇವಸ್ಥಾನದ ಆಡಳಿತ ಮಂಡಳಿ ದೂರು ನೀಡಿದ ಹಿನ್ನೆಲೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ , ಗ್ರಾಮ ಸಹಾಯಕರು ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಗೇಟ್ ತೆಗೆಯುವಂತೆ ಸೂಚಿಸಿದ್ದಾರೆ.ನಂತರ ಗೇಟ್ ತೆರವುಗೊಳಿಸಲಾಗಿದೆ.