ಹೃದಯಾಘಾತ: ಕೊನೆಯುಸಿರೆಳೆದ ಕಡಬದ ಯೋಧ: ಹುಟ್ಟೂರಿಗೆ ಇಂದು ಪಾರ್ಥಿವ ಶರೀರ

ಕಡಬ: ತಮಿಳುನಾಡಿನ ಕೊಯಂಬತ್ತೂರು ಮದ್ರಾಸ್ ರಿಜಿಮೆಂಟ್‌ನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದ ಲಿಜೇಶ್ ಕುರಿಯನ್ ಅವರು ಮಾ.26ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಲಿಜೇಶ್ ಕುರಿಯನ್ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ತರಪ್ಪೇಳ್‌ ನಿವಾಸಿ ಜೋನಿ ಎಂಬವರ ಮಗನಾಗಿದ್ದು, ಒಂದು ವರ್ಷದ ಪುಟ್ಟ ಮಗು ಹಾಗೂ ಪತ್ನಿ, ಕುಟುಂಬಸ್ಥರನ್ನು ಅಗಲಿದ್ದಾರೆ.

ಲಿಜೇಶ್ ಪಾರ್ಥಿವ ಶರೀರ ಇಂದು ಬೆಳಗ್ಗೆ ಕಡಬ ತಲುಪಲಿದೆ. 11:30ಕ್ಕೆ ಕುಟ್ರುಪ್ಪಾಡಿ ಸಂತ ಮೇರಿಸ್ ಕ್ಯಾಥೋಲಿಕ್ ಫೋರೋನಾ ದೇವಾಲಯದಲ್ಲಿ ವಿಧಿವಿಧಾನವಾಗಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ಯುವಕ- ಯುವತಿಯರು, ಶಾಲಾ ವಿದ್ಯಾರ್ಥಿಗಳು ಹೃದಯಾಘಾತಕ್ಕೆ ಹೆಚ್ಚಾಗಿ ಬಲಿಯಾಗುತ್ತಿರುವುದು ಆತಂಕ ಸೃಷ್ಠಿಸಿದೆ.

error: Content is protected !!