ರಾಜಕೇಸರಿ ಟ್ರಸ್ಟ್ ಸೇವಾ ಯೋಜನೆಗಳು ಮಾದರಿ: ಸಾನಿಧ್ಯ ಉತ್ಸವ ಉದ್ಘಾಟಿಸಿ ಶಾಸಕ ಹರೀಶ್ ಪೂಂಜ:

 

 

 

 

ಬೆಳ್ತಂಗಡಿ: ರಾಜಕೇಸರಿ ಸಂಘಟನೆ ಕಳೆದ ಹಲವಾರು ವರ್ಷಗಳಿಂದ ವಿವಿಧ ಸೇವಾ ಯೋಜನೆಗಳ ಮೂಲಕ ಮಾದರಿ ಸಂಘಟನೆಯಾಗಿ ಮೂಡಿಬರುತ್ತಿದೆ.‌ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಮಾ 25 ರಂದು ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ ಎಂಡೊಸಲ್ಫಾನ್ ಸಂತ್ರಸ್ತ ಮಕ್ಕಳಿಗಾಗಿ ಶ್ರೀ ಗಣೇಶ ಸೇವಾ ಟ್ರಸ್ಟಿನ ಸೇವಾ ಘಟಕ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ.ಬೆಳ್ತಂಗಡಿ ಇವರ ನೇತೃತ್ವದಲ್ಲಿ 536ನೇ ಸಾಂಸ್ಕೃತಿಕ ಸೇವಾ ಯೋಜನೆ ಸಾನಿಧ್ಯ ಉತ್ಸವ 2023 ಉದ್ಘಾಟಿಸಿ ಮಾತನಾಡಿದರು.
ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರಗಳು
ಎಂಡೊಸಲ್ಫಾನ್ ಪೀಡಿತ ಮಕ್ಕಳಿಗೆ ಹಾಗೂ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ಬಾಳಿನಲ್ಲಿ ಬೆಳಕು ಚೆಲ್ಲುವ ಕೆಲಸವನ್ನು ಮಾಡುತ್ತ ಅವರನ್ನೂ ಸಮಾಜದ ಮುಖ್ಯವಾಹಿನಿ ತರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿವೆ. ಇವರ ಈ ಸೇವೆ ಅಭಿನಂದನೀಯ ಎಂದ ಅವರು ರಾಜಕೇಸರಿ ಟ್ರಸ್ಟ್ ಹಾಗೂ ಸಾನಿಧ್ಯ ತರಬೇತಿ ಕೇಂದ್ರದ ಪ್ರತಿಯೊಂದು ಸೇವಾ ಯೋಜನೆಗಳಿಗೆ ಬೆಂಬಲವಾಗಿ ನಿಂತು ಶಕ್ತಿ ತುಂಬುವ ಕೆಲಸ ಶಾಸಕನಾಗಿ ಮಾಡುತ್ತೇನೆ ಎಂದರು.
ಬೆಳ್ತಂಗಡಿ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಎಣಿಂಜೆ ಮಾತನಾಡಿ ಕಳೆದ ಹಲವಾರೂ ವರ್ಷಗಳಿಂದ ಸಮಾಜದ ಅಶಕ್ತ ಬಡ ಕುಟುಂಬಗಳಿಗೆ ಮನೆ. ಅನಾರೋಗ್ಯ ಪೀಡಿತರಿಗೆ ಸಹಾಯಧನ, ಅದೇ ರೀತಿ ರಕ್ತದಾನ ಶಿಬಿರಗಳು ಅಲ್ಲದೇ ಇನ್ನಿತರ ಸೇವಾ ಯೋಜನೆಗಳ ಮೂಲಕ ದೀಪಕ್ ಜಿ.ನೇತೃತ್ವದ ರಾಜಕೇಸರಿ ಸಂಸ್ಥೆ ವಿಶೇಷ ರೀತಿಯ ಸೇವಾ ಯೋಜನೆಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಎಂಡೊಸಲ್ಪಾನ್ ಪೀಡಿತ ಹಾಗೂ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ಸಾನಿಧ್ಯ ಉತ್ಸವ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿರುವುದು ನಿಜವಾದ ಸೇವೆಯಾಗಿದೆ.ಇವರ ಈ ಸಮಾಜ ಸೇವಾ ಕಾರ್ಯಗಳಿಗೆ ಬೆಂಬಲವಾಗಿ ಶಕ್ತಿ ತುಂಬಿ ಸಂಘಟನೆಯನ್ನು ಬಲಪಡಿಸುವ ಕೆಲಸ ಎಲ್ಲರೂ ಸೇರಿ ಮಾಡಬೇಕಾಗಿದೆ ಎಂದರು. ಚಲನಚಿತ್ರ ನಿರ್ದೆಶಕ ಇಸ್ಮಾಯಿಲ್ ಮೂಡುಶೆಡ್ಡೆ ಮಾತನಾಡಿ ಮುಂದಿನ ದಿನಗಳಲ್ಲಿ ಸಾನಿಧ್ಯ ಕೇಂದ್ರದ ಮಕ್ಕಳ ಕಿರು ಚಿತ್ರ ಮಾಡುವ ಬಗ್ಗೆ ಯೋಚನೆ ಇದ್ದು ಅದರಿಂದ ಬರುವ ಹಣವನ್ನು ಸಾನಿಧ್ಯ ತರಬೇತಿ ಮಕ್ಕಳ ಕಾರ್ಯಯೋಜನೆಗಳಿಗೆ ವಿನಿಯೋಗಿಸಲಾಗುವುದು ಎಂದರು.

ವೈದ್ಯಕೀಯ ಪ್ರಕೋಷ್ಢ ಸಂಚಾಲಕ ಡಾ. ಎಂ.ಎಂ ದಯಾಕರ್ ಮಾತನಾಡಿ ಭಿನ್ನ ಸಾಮರ್ಥ್ಯದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಿಜವಾಗಲೂ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಇದರ ಹಿಂದೆ ಶ್ರಮ ಪಡುತ್ತಿರುವ ಸಾನಿಧ್ಯ ತರಬೇತಿ ಕೇಂದ್ರದ ಎಲ್ಲರಿಗೂ ಅಭಿನಂದನೆಗಳು ಎಂದರು.

ಸಭಾಧ್ಯಕ್ಷತೆ ವಹಿಸಿ ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತ ಅಧಿಕಾರಿ ವಸಂತ ಶೆಟ್ಟಿ ಮಾತನಾಡಿ ಭಿನ್ನ ಸಾಮಾರ್ಥ್ಯದ ಮಕ್ಕಳಿಗೆ ವಿಶೇಷ ರೀತಿಯ ತರಬೇತಿಗಳನ್ನು ನೀಡುತ್ತ ಅವರೂ ಎಲ್ಲರಂತೆ ಇರಬೇಕು ಎಂಬ ನಿಟ್ಟಿನಲ್ಲಿ ತನ್ನ ಮನೆಯವರಂತೆ ಸಾನಿಧ್ಯದ ಎಲ್ಲರೂ ಶ್ರಮ ವಹಿಸುತಿದ್ದಾರೆ. ಅದ್ದರಿಂದ ಇನ್ನಷ್ಟು ಸಮಾಜದ ಸಹಕಾರ ಸಾನಿಧ್ಯ ಸಂಸ್ಥೆಯ ಮೇಲಿರಲಿ. ರಾಜಕೇಸರಿ ಸಂಸ್ಥೆ ದೀಪಕ್ ಅವರ ಸೇವಾ ಮನೋಬಾವ ಎಲ್ಲರಿಗೂ ಪ್ರೇರಣೆಯಾಗಲಿ ಅವರೂ ಕೂಡ ಸಾನಿಧ್ಯ ಕೇಂದ್ರದ ಸಿಬ್ಬಂದಿ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಸಾನಿಧ್ಯ ಕೇಂದ್ರದ ವತಿಯಿಂದ ರಾಜಕೇಸರಿ ಟ್ರಸ್ಟ್ ಸಂಸ್ಥಾಪಕ ದೀಪಕ್ ಜಿ. ಅವರನ್ನು ಗೌರವಿಸಲಾಯಿತು.ಅದಲ್ಲದೇ ಕಟ್ಟೆಮಾರ್ ಮಂತ್ರ ದೇವತೆ ಕ್ಷೇತ್ರದ ಮನೋಜ್ ಕಟ್ಟೆಮಾರ್ ಸೇರಿದಂತೆ 4 ಮಂದಿಗೆ ಸಾನಿಧ್ಯ ರತ್ನ ಗೌರವ ನೀಡಿ ಸನ್ಮಾನಿಸಲಾಯಿತು

ಕಾರ್ಯಕ್ರಮದಲ್ಲಿ ಸುವರ್ಣ ಪ್ರತಿಷ್ಠಾನದ ಸಂಪತ್ ಸುವರ್ಣ, ಸಾರ್ವಜನಿಕ ಆಸ್ಪತ್ರೆಯ ಕಾರ್ಯಕ್ರಮ ನಿರೂಪಕ ಅಜೇಯ್, ಕಿಶೋರ್ ಕುಮಾರ್ ಮಂತ್ರದೇವತೆ ಕ್ಷೇತ್ರ ಕಟ್ಟೆಮಾರ್ , ಗುರುದೇವ ವಿವಿಧೋದ್ಧೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶ್ವಥ್ , ಉದ್ಯಮಿ ಸೆಬಾಸ್ಟಿನ್, ಉಪಸ್ಥಿತರಿದ್ದರು. ದೀಪಕ್ ಜಿ ಸ್ವಾಗತಿಸಿ ಪ್ರೇಮ್ ರಾಜ್ ರೋಶನ್ ಸಿಕ್ವೇರಾ ಧನ್ಯವಾದವಿತ್ತರು ಲೋಹಿತ್ ಕಾರ್ಯಕ್ರಮ ನಿರೂಪಿಸಿದರು. ಶಾರದ ಅಂದರ ಗೀತಾ ಗಾಯನ ಕಲಾ ಸಂಘ ಶೃಂಗೇರಿ ಇವರಿಂದ ರಸ ಮಂಜರಿ ಕಾರ್ಯಕ್ರಮ, ಎಂಡೊಸಲ್ಫಾನ್ ಪೀಡಿತ ಹಾಗೂ ಮಾನಸಿಕ ಬಿನ್ನ ಸಾಮಾರ್ಥ್ಯದ ಮಕ್ಕಳಿಂದ ಕಲ್ಲುರ್ಟಿ ಕಲ್ಕುಡ ನಾಟಕ, ಹಾಗೂ ನಾಗಸ್ತ್ರ ಕುಂಭಕರ್ಣ ಕಾಳಗ ಯಕ್ಷಗಾನ ಅಲ್ಲದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

error: Content is protected !!