ಸಾರ್ವಜನಿಕರಿಗೆ ಶುಭ ಸುದ್ದಿ : ಪಾನ್ ಲಿಂಕ್ ಗಡುವು ಜೂ 30ಕ್ಕೆ ವಿಸ್ತರಣೆ:

 

 

 

 

ದೆಹಲಿ: ಆಧಾರ್‌ನೊಂದಿಗೆ ಪಾನ್ ಲಿಂಕ್ ಮಾಡಲು ಸರ್ಕಾರವು ನೀಡಿದ್ದ ಗಡುವನ್ನು ಮೂರು ತಿಂಗಳವರೆಗೆ ವಿಸ್ತರಣೆ ಮಾಡಿದೆ. ಹೌದು, ಜೂನ್ 30ರವರೆಗೆ ವಿಸ್ತರಿಸಿದೆ. ಈ ಹಿಂದೆ ಆಧಾರ್ ಮತ್ತು  ಪಾನ್ ಅನ್ನು ಲಿಂಕ್ ಮಾರ್ಚ್ 31ರವರೆಗೆ ಸಮಯವಿತ್ತು. ಜೊತೆಗೆ ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ತೆರಿಗೆ ಇಲಾಖೆ ತಿಳಿಸಿತ್ತು. ಸದ್ಯ ಪಾನ್ ಮತ್ತು ಆಧಾರ್ ಲಿಂಕ್ ಮಾಡುವ ಅವಧಿಯನ್ನು ವಿಸ್ತರಿಸಲಾಗಿದೆ. ಇನ್ನಾದರೂ ಪಾನ್ ಮತ್ತು ಆಧಾರ್ ಲಿಂಕ್ ಮಾಡಲು ಮುಂದಾಗಬೇಕಿದೆ. ಲಿಂಕ್​ ಮಾಡಲು ಸಂಬಂಧಿಸಿದಂತೆ ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ ಆದಾಯ ತೆರಿಗೆ ಇಲಾಖೆಯು ಟ್ವೀಟ್ ಮಾಡಿದೆ.

ಈ ಹಿಂದೆ, 2023ರ ಮಾರ್ಚ್ 31ರೊಳಗೆ ಆಧಾರ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿತ್ತು. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) 2022ರ ಜೂನ್ 30ನಂತರ ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್​ ಕಾರ್ಡ್ ಅನ್ನು ಲಿಂಕ್ ಮಾಡಲು ಒಂದು ಸಾವಿರ ರೂಪಾಯಿಗಳ ವಿಳಂಬ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ತಿಳಿಸಲಾಗಿತ್ತು. ಮಾರ್ಚ್ 31ರೊಳಗೆ ದಂಡವನ್ನು ಪಾವತಿಸಿ ಆಧಾರ್ ಕಾರ್ಡ್‌ನೊಂದಿಗೆ ಪಾನ್‌ಕಾರ್ಡ್ ಲಿಂಕ್ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಇಲ್ಲದಿದ್ದರೆ, ನಿಮ್ಮ ಪಾನ್ ನಿಷ್ಕ್ರಿಯವಾಗುತ್ತದೆ ಎಂದು ಇಲಾಖೆ ಹೇಳಿತ್ತು. ಜೋಡಣೆ ಮಾಡದೇ ಇದ್ದರೆ, ಹಣಕಾಸಿನ ವ್ಯವಹಾರಗಳು ಅಥವಾ ಹಣಕಾಸಿನ ಕೆಲಸಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗಳನ್ನು ತಪ್ಪಿಸಲು, ಇಂದೇ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಿಕೊಳ್ಳಿ. ಆದರೆ, ಮತ್ತೆ ಕೊನೆಯ ದಿನಾಂಕದವರೆಗೆ ಕಾಯದಿರಿ.
10 ಸಾವಿರದವರೆಗೆ ದಂಡ ವಿಧಿಸುವ ಎಚ್ಚರಿಕೆ ನೀಡಿತ್ತು ಇಲಾಖೆ: ಈ ಹಿಂದೆ, ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದ್ದು, ಆದಷ್ಟು ಬೇಗ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವಂತೆ ಜನರನ್ನು ಒತ್ತಾಯಿಸಿತ್ತು. ಇಲ್ಲದಿದ್ದರೆ, ನಂತರ ಭಾರೀ ದಂಡವನ್ನು ಪಾವತಿಸಬೇಕಾಗಬಹುದು ಎಂದು ಹೇಳಿತ್ತು. ಮಾರ್ಚ್ 31ರೊಳಗೆ ಎರಡೂ ದಾಖಲೆಗಳನ್ನು ಲಿಂಕ್ ಮಾಡಲು ಕೇವಲ 1,000 ರೂ.ಗಳನ್ನು ದಂಡವಾಗಿ ಪಾವತಿಸಬೇಕಾಗಿತ್ತು. ಅದೇ ಸಮಯದಲ್ಲಿ, ಏಪ್ರಿಲ್ 1ರಿಂದ ಪ್ಯಾನ್ ಅನ್ನು ಪುನಃ ಸಕ್ರಿಯಗೊಳಿಸಲು 10,000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ. ಇದರ ನಂತರವೇ ನಿಮ್ಮ ಪಾನ್‌ಕಾರ್ಡ್ ಅನ್ನು ಸಕ್ರಿಯಗೊಳಿಸಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿತ್ತು

ಪಾನ್​ ನಿಷ್ಕ್ರಿಯವಾದರೆ ಆಗುವ ತೊಂದರೆ ಏನು?:

ಪಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ, ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ, ನೀವು ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಇತ್ಯಾದಿಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ. ಗಮನಾರ್ಹವಾಗಿ, 50,000ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ, ಆಧಾರ್ ಕಾರ್ಡ್ ಅಗತ್ಯವಿದೆ. ಸರ್ಕಾರ ಪ್ಯಾನ್ ಮತ್ತು ಆಧಾರ್ ಅನ್ನು ಏಕೆ ಲಿಂಕ್ ಮಾಡುತ್ತಿದೆ ಎಂಬ ಈ ಪ್ರಶ್ನೆಗೆ ಉತ್ತರವೆಂದರೆ, ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವ ಮೂಲಕ ಯಾವುದೇ ರೀತಿಯ ವ್ಯವಹಾರವನ್ನು ಟ್ರ್ಯಾಕ್ ಮಾಡಬಹುದು. ಇದು ತೆರಿಗೆ ವಂಚನೆ ಹಾಗೂ ವಂಚನೆಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಪಾನ್- ಆಧಾರ್ ಲಿಂಕ್ ಮಾಡುವ ವಿಧಾನ ಹೇಗೆ?

ಮೊದಲನೆಯದಾಗಿ ಪ್ಯಾನ್​ ಕಾರ್ಡ್ ಹೊಂದಿರುವವರ ಆದಾಯ ತೆರಿಗೆ www.incometax.gov.in ನ ಇ-ಫೈಲಿಂಗ್ ವೆಬ್‌ಸೈಟ್‌ಗೆ ಹೋಗಬೇಕು.ನೀವು ಇಲ್ಲಿ ನೋಂದಾಯಿಸದಿದ್ದರೆ, ಮೊದಲು ನೋಂದಾಯಿಸಿ.ಬಳಕೆದಾರ ಐಡಿ, ಪಾಸ್ ವರ್ಡ್ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.ನಂತರ ನಿಮ್ಮ ಮುಂದೆ ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ. ಅದರಲ್ಲಿ ಆಧಾರ್‌ಗೆ ಲಿಂಕ್ ಮಾಡಲಾದ ಪಾನ್ ಆಯ್ಕೆಯು ಗೋಚರಿಸುತ್ತದೆ.ಈ ಆಯ್ಕೆಯಲ್ಲಿ, ನಿಮ್ಮ ಪ್ಯಾನ್ ಪ್ರಕಾರ, ನಿಮ್ಮ ಹೆಸರು, ಹುಟ್ಟಿದ ದಿನಾಂಕ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಈಗಾಗಲೇ ಭರ್ತಿ ಆಗಿರುತ್ತದೆ.ಬಳಿಕ, ವೆಬ್‌ಸೈಟ್‌ನಲ್ಲಿ ನೀಡಿರುವ ನಿಮ್ಮ ಆಧಾರ್ ಮತ್ತು ಪ್ಯಾನ್ ಮಾಹಿತಿಯನ್ನು ಪರಿಶೀಲಿಸಬೇಕು.ಇದರ ನಂತರ ಲಿಂಕ್ ನೌ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.ಇಷ್ಟೆಲ್ಲಾ ಮಾಡಿದ ನಂತರ, ನಿಮಗೆ ಮೇಸೆಜ್​ಯೊಂದು ಬರುತ್ತದೆ, ಅದರಲ್ಲಿ ನಿಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ ಎಂದು ಬರೆಯಲಾಗುತ್ತದೆ.
ನೀವು ಈಗಾಗಲೇ ಆಧಾರ್ ಮತ್ತು ಪ್ಯಾನ್ ಲಿಂಕ್ ಹೊಂದಿದ್ದೀರಾ ಎಂದು ಪರಿಶೀಲಿಸಿ..

ಇ-ಫೈಲಿಂಗ್ ಪೋರ್ಟಲ್ ಮುಖಪುಟದಲ್ಲಿ, ‘ಕ್ವಿಕ್ ಲಿಂಕ್ಸ್’ ಗೆ ಹೋಗಿ ಮತ್ತು ಲಿಂಕ್ ಆಧಾರ್ ಸ್ಥಿತಿಯ ಮೇಲೆ ಕ್ಲಿಕ್ ಮಾಡಿ.ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಆಧಾರ್ ಸ್ಥಿತಿಯನ್ನು ವೀಕ್ಷಿಸಿ ಲಿಂಕ್ ಅನ್ನು ಕ್ಲಿಕ್ ಮಾಡಿ.ನಂತರ ಯಶಸ್ವಿ ಪರಿಶೀಲನೆಯ ನಂತರ, ನಿಮ್ಮ ಲಿಂಕ್ ಆಧಾರ್ ಸ್ಥಿತಿಯ ಕುರಿತು ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.

error: Content is protected !!