ಬೆಳ್ತಂಗಡಿ: ಕಪುಚಿನ್ ಕೃಷಿಕ್ ಸೇವಾ ಕೇಂದ್ರದ ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ವಾರ್ಷಿಕೋತ್ಸವವನ್ನು ಫೆ.04 ರಂದು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೊಲ ಅಧಿಕಾರಿ ವೀರುಪಾಕ್ಷಪ್ಪನವರು ಮಾತನಾಡಿ ‘ಬದುಕಬೇಕಾದರೆ ಶಿಕ್ಷಣಬೇಕು, ಕೆಲಸವನ್ನು ಮಾಡಬೇಕಾದರೆ ಮನಸ್ಸು ಇರಬೇಕು. ಅದು ಶಿಕ್ಷಕರಿಗೆ ಇದೆ. ಎಲ್ಲಾರಿಗೂ ಅಭಿನಂದನೆ’ ಎಂದರು.
ದಾನಿ ಸಂಸ್ಥೆ KCWA ಇದರ ಸಕ್ರಿಯಾ ಸದಸ್ಯರಾದ ಲಾನ್ಸಿ ರೋಡ್ರಿಗಸ್‌ರವರು ‘ದಯಾ ಶಾಲೆಯಲ್ಲಿ ಪ್ರತಿಯೊಂದು ಮಗುವನ್ನು ಮುಖ್ಯ ವಾಹಿನಿಗೆ ತರುವ ಸೇವೆ ಶ್ಲಾಘನೀಯವಾದದ್ದು. ನಾವು ಅತ್ಯಾಲ್ಪ ಧನ ಸಹಾಯ ಮಾಡಿದರೂ, ದಯಾ ಸಂಸ್ಥೆ ನೀಡುವ ಸೇವೆ ಅತ್ಯಾಮುಲ್ಯವಾದದ್ದು. ಈ ಸೇವೆಯ ಘನತೆ ಗೌರವ ಅವರಿಗೆ ಸಲ್ಲವಂತದ್ದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೋಲಿ ಟ್ರಿನಿಟಿ ಕರ್ನಾಟಕ ಉಪಪ್ರಾಂತ್ಯಧಿಕಾರಿ ರೆ. ಫಾ. ಪೌಲ್ ಮೆಲ್ವಿನ್ ಡಿಸೋಜಾರವರು ‘ದಯಾ ವಿಶೇಷ ಶಾಲೆಯು ದಿವ್ಯಂಗ ಮಕ್ಕಳಿಗೊಸ್ಕರ ಸ್ಥಾಪಿತವಾಗಿದ್ದು, ಈ ಮಕ್ಕಳಿಗೆ ಫಾದರ್ ವಿನೋದ್ ರವರು ತುಂಬ ಕಷ್ಟಪಟ್ಟಿದ್ದಾರೆ, ಫಾದರ್ ಮೊದಲು ಬೆಳ್ತಂಗಡಿ ವಲಯದಲ್ಲಿ ಸಮಾಜ ಸೇವೆ ಮಾಡುತ್ತಿದ್ದು, ಇಲ್ಲಿನ ದಿವ್ಯಂಗ ಮಕ್ಕಳು ಇರುವುದರ ಕುರಿತು ಸೇವೆ ಮಾಡಬೇಕು ಎಂಬುದಾಗಿ ಅವರ ಮನಸ್ಸಿಗೆ ಬಂದಿದೆ. ಅವರು ಪ್ರೇರಣೆ ಮತ್ತು ಮನ್ನಣೆ ಹಾಗೂ ನಾಕಣೆಯಿಂದ ಸೇವೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆಯು 15 ಮಕ್ಕಳಿಂದ ಪ್ರಾರಂಭವಾಗಿ ಇಂದು 150 ಮಕ್ಕಳು ಇದ್ದಾರೆ. ಇವರ ಪ್ರಗತಿಯಲ್ಲಿ ತುಂಬ ಬೆಳೆವಣಿಗೆಯನ್ನು ತಂದಿದೆ. ಕೊವಿಡ್ ಸಮಯದಲ್ಲಿ ಮುಂಜಾಗ್ರತೆ ಕ್ರಮ ತೆಗೆದುಕೊಂಡು ಎಲ್ಲಾ ಮಕ್ಕಳಿಗೆ ಪರೀಕ್ಷೆ ಬರೆಸಿ ಎಲ್ಲಾ ಮಕ್ಕಳು ಪಾಸಗಿದ್ದಾರೆ ಎಂದರು.
ಭಾರತೀಯ ಸ್ಟೇಟ್ ಭ್ಯಾಂಕ್ ವ್ಯಾವಸ್ಥಪಾಕರಾದ ಪಾದ್ಮನಾಭ ನಾಯಕ್, ವಂ. ಫಾ|| ವಿನೋದ್ ಮಸ್ಕರೇನ್ಹಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದಯಾ ಶಾಲೆಯ ಮಖ್ಯ ಶಿಕ್ಷಕಿ ದಿವ್ಯ ವಾರ್ಷಿಕ ವರದಿ ವಾಚಿಸಿದರು, ಸಂಸ್ಥೆಯ ಸಹ ಶಿಕ್ಷಕಿ ರಶ್ಮಿ ಮತ್ತು ಐಶ್ವರ್ಯ ಕಾರ್ಯ ನಿರೂಪಿಸಿ ಧನ್ಯರವರು ಸಮರ್ಪಿಸಿದರು. ಬಳಿಕ ಶಾಲಾ ಮಕ್ಕಳಿಂದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬಂತು