ಬೆಳ್ತಂಗಡಿ: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಫೆ.27ರಂದು ಲೇಖಕ ರೋಹಿತ್ ಚಕ್ರತೀರ್ಥ ಆಗಮಿಸಿದ್ದು ಈ ವೇಳೆ ಬೆಳ್ತಂಗಡಿಯ ಸ್ಥಳೀಯ ಮಾದ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು ‘ನಾನು ಇವತ್ತು ಬರುವುದಕ್ಕೆ ಒಂದು ಕಾರಣ ಮಹಾಲಿಂಗೇಶ್ವರ ದೇವರ ಸನ್ನಿಧಿಯಾದರೆ ಎರಡನೇ ಕಾರಣ ಹರೀಶ್ ಪೂಂಜಾರವರು, ಇದನ್ನು ನಾನು ಹೇಳಲೇಬೇಕು. ಏಕೆಂದರೆ ಪಠ್ಯ ಪುಸ್ತಕ ರಚನೆಯ ಅಥವಾ ಪರಿಷ್ಕರಣೆಯ ಸಂದರ್ಭದಲ್ಲಿ ನಡೆದ ಅನೇಕ ಘಟನಾವಳಿಗಳಲ್ಲಿ ನನ್ನ ಜೊತೆ ಬಲವಾಗಿ ನಿಂತದ್ದು ಹರೀಶ್ ಪೂಂಜಾರವರು’ ಎಂದು ಹೇಳಿದ್ದಾರೆ ಎಂದು ವಸಂತ ಬಂಗೇರ ಹೇಳಿದರು.
ಅವರು ಬೆಳ್ತಂಗಡಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಘಟನೆ ಕುರಿತು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ತೆಗೆದುಹಾಕುವಲ್ಲಿ, ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜಾರವರ ದೊಡ್ಡ ಪಾತ್ರ ಇದೆ ಎನ್ನುವುದು ಈಗ ರೋಹಿತ್ ಚಕ್ರತೀರ್ಥರ ಮೂಲಕ ದೇವರ ಮುಂದೆ ಜಗಜ್ಜಾಹಿರಾಗಿದೆ. ಶಾಸಕರ ಈ ನಡೆಯನ್ನು ನಮ್ಮ ಸಂಘವು ತೀವ್ರವಾಗಿ ಖಂಡಿಸುತ್ತಿದ್ದು ಈ ಬಗ್ಗೆ ಶಾಸಕ ಹರೀಶ್ ಪೂಂಜಾ ರಾಜ್ಯದ ಜನತೆಯ ಬಳಿ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದರು.ಪತ್ರಿಕಾಗೋಷ್ಠಿ ಯಲ್ಲಿ ಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ,ಕಾರ್ಯದರ್ಶಿ ಜಯವಿಕ್ರಂ ಕಲ್ಲಾಪು, ಮಾಜಿ ಅಧ್ಯಕ್ಷರುಗಳಾದ ಭಗಿರಥ ಜಿ. ಪಿತಾಂಬರ ಹೆರಾಜೆ,ಜಯರಾಮ ಬಂಗೇರ,ಉಪಾಧ್ಯಕ್ಷ ಶೇಖರ ಬಂಗೇರ, ಯುವ ಬಿಲ್ಲವ ವೇದಿಕೆಯ ನಿತಿನ್ ಎಚ್ ಕೋಟ್ಯಾನ್,ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ, ಸುಜಿತಾ ವಿ.ಬಂಗೇರ,ನಿರ್ದೇಶಕ ಗೋಪಾಲ ಪೂಜಾರಿ ಮಚ್ಚಿನ ಉಪಸ್ಥಿತರಿದ್ದರು.