ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಒಲಿದ ಭಜನಾ ಸ್ಪರ್ಧೆಯ ಪ್ರಥಮ ಸ್ಥಾನ: ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ನಿಡಿಗಲ್ ದ್ವಿತೀಯ ₹ 5 ಲಕ್ಷ ದ್ವಿತೀಯ 2.5 ಲಕ್ಷ ಬಹುಮಾನದ ಚೆಕ್ ಹಸ್ತಾಂತರಿಸಿದ ಶಾಸಕ ಹರೀಶ್ ಪೂಂಜ

 

 

 

 

 

ಬೆಳ್ತಂಗಡಿ;ತಾಲೂಕಿನ ಭಜನಾ ಮಂಡಳಿಗಳನ್ನು ಉತ್ತೇಜಿಸುವ ದೃಷ್ಠಿಯಿಂದ, ಯುವ ಜನತೆಯಲ್ಲಿ ಸಧ್ವಿಚಾರ ಧಾರೆಯನ್ನು, ಧಾರ್ಮಿಕ ಜಾಗೃತಿಯನ್ನು ಪ್ರೇರೇಪಿಸುವ ಸದಾಶಯದೊಂದಿಗೆ

ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ವೇಣೂರು ಪ್ರಖಂಡ ಮತ್ತು ಶ್ರಮಿಕ ಸೇವಾ ಟ್ರಸ್ಟ್ ಬೆಳ್ತಂಗಡಿ ನೇತೃತ್ವದಲ್ಲಿ ತಾಲೂಕಿನ ಭಜನಾ ಮಂಡಳಿಗಳಿಗೆ ಆಯೋಜಿಸಿದ ಭಜನಾ ಸ್ಪರ್ಧೆಗಳ ಸಮಾರೋಪ ಸಮಾರಂಭವು ಮಾ 01 ರ ಸಂಜೆ 6 ಗಂಟೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉಪಸ್ಥಿತಿಯಲ್ಲಿ ವೇಣೂರಿನ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಭಜನಾ ಮಂಡಳಿ ಪ್ರಥಮ ಸ್ಥಾನಿಯಾಗಿ ರೂ 5 ಲಕ್ಷದ ಚೆಕ್ಕನ್ನು ಶಾಸಕ ಹರೀಶ್ ಪೂಂಜ ವಿತರಿಸಿದರು. ದ್ವಿತೀಯ ಸ್ಥಾನವನ್ನು ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ನಿಡಿಗಲ್ ಪಡೆದುಕೊಂಡಿದೆ. ಅದಲ್ಲದೇ    ಪಂಚಶ್ರೀ ಭಜನಾ ಮಂಡಳಿ ಮಿತ್ತಬಾಗಿಲು,ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮುಂಡಾಜೆ,ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಪಡ್ಡಂದಡ್ಕ ಹೊಸಂಗಡಿ,ಚಾಮುಂಡೇಶ್ವರಿ ಭಜನಾ ಮಂಡಳಿ ಮುಳಿಕ್ಕಾರ್ ಧರ್ಮಸ್ಥಳ,ನಿತ್ಯನೂತನ ಭಜನಾ ಮಂಡಳಿ ಜೋಡುಸ್ಥಾನ ಧರ್ಮಸ್ಥಳ.ಸೇರಿದಂತೆ 5 ಭಜನಾ ಮಂಡಳಿಗಳು ತಲಾ ಒಂದು ಲಕ್ಷ ಬಹುಮಾನ ಪಡೆದುಕೊಂಡಿವೆ.

.2022 ನೇ ಜನವರಿ 14 ರಂದು ಸ್ಪರ್ಧೆ ಪ್ರಾರಂಭವಾಗಿ ಮಾರ್ಚ್ ವರೆಗೆ ನಡೆದಿತ್ತು.

ಕುಕ್ಕೇಡಿಯ ಬುಳೆಕ್ಕರ ಶಾರದಾಂಭ ಭಜನಾ ಮಂಡಳಿ ವಠಾರದಲ್ಲಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಸ್ಪರ್ಧೆಗೆ ಚಾಲನೆ ನೀಡಿದ್ದರು.
ತಾಲೂಕಿನ 21 ಭಜನಾ ಮಂಡಳಿಗಳ ಪುರುಷರು,ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಒಟ್ಟು  63 ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

error: Content is protected !!