ನವಶಕ್ತಿ ಕಾಶಿ ಶೆಟ್ಟಿ ಸ್ಮರಣಾರ್ಥ ಅಶಕ್ತ ಕುಟುಂಬಗಳಿಗೆ ಆಸರೆ: “ಕಾಶಿ ಸದನ” ವಸತಿ ಯೋಜನೆಗಳಿಗೆ ನಾರಾವಿಯಲ್ಲಿ ಚಾಲನೆ: ಅಮ್ಮನ ಆಸೆಯನ್ನು ಈಡೇರಿಸುವ ಕೆಲಸ ನಡೆಯುತ್ತಿದೆ,ಶಶಿಧರ್ ಶೆಟ್ಟಿ:

 

 

ಬೆಳ್ತಂಗಡಿ: ತಾಯಿಯ ನೆನಪು ಸದಾ ನೆನಪಲ್ಲಿರಬೇಕು ಎಂಬ ನಿಟ್ಟಿನಲ್ಲಿ ಉದ್ಯಮಿಗಳು ಸದಾ ಸಾಮಾಜಿಕ ಚಿಂತನೆಗಳ ಮೂಲಕ ಹಲವಾರೂ ಸೇವಾ ಯೋಜನೆಗಳಿಗೆ ದೊಡ್ಡ ಮಟ್ಟದ ಸಹಕಾರ ನೀಡುತ್ತಿರುವ ಬಡವರ ನೋವಿಗೆ ಶಕ್ತಿಯಾಗಿರುವ ಬೆಳ್ತಂಗಡಿ ಬಂಟರ ಸಂಘದ ಗೌರವ ಮಾರ್ಗದರ್ಶಕ ಶಶಿಧರ್ ಶೆಟ್ಟಿಯವರ ಕಲ್ಪನೆಯಂತೆ ತಾಯಿ ಕಾಶಿ ಶೆಟ್ಟಿಯವರ ಸ್ಮರಣಾರ್ಥ “ಕಾಶಿಸದನ” ವಸತಿ ಯೋಜನೆಗೆಳಿಗೆ ನಾರಾವಿ ವಲಯದ ಕೊಕ್ರಾಡಿ ಗಿರಿಜಾ ಶೆಟ್ಟಿ ಇವರ ನಿವೇಶನದಲ್ಲಿ ಶಿಲಾನ್ಯಾಸ ನೆರವೇರಿಸಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಪ್ರತಿಯೊಬ್ಬರ ದೊಡ್ಡ ಕನಸು ನನಗೊಂದು ಮನೆ ಬೇಕು ಆ ಮನೆಯಲ್ಲಿ ನೆಮ್ಮದಿಯಲ್ಲಿರಬೇಕು ಎಂಬುವುದಾಗಿದೆ.
ಸ್ವಂತ ಸೂರು ಇದ್ದರೆ ಮಾತ್ರ ಒಬ್ಬ ಮನುಷ್ಯನಿಗೆ ನೆಮ್ಮದಿಯಲ್ಲಿ ಜೀವನ ಸಾಗಿಸಲು ಸಾಧ್ಯ,ಸರಿಯಾದ ಮನೆ ಇಲ್ಲದಿದ್ದರೆ ಆಗುವ ಸಂಕಟ ನೋವನ್ನು ನಾನು ಕೂಡ ಅನುಭವಿಸಿ ಬಂದವನು.

ನನ್ನ ತಾಯಿ ನನಗೆ ಹಸಿವು ಅನ್ನದ ಗೌರವವನ್ನು ಚಿಕ್ಕಂದಿನಿಂದಲೇ ಹೇಳಿಕೊಟ್ಟಿದ್ದಾರೆ. ಸದಾ ಅವರ ಬಾಯಲ್ಲಿ ಬರುತ್ತಿದ್ದ ಮಾತು ಹಸಿವು ಎಂದು ಬಂದವರಿಗೆ ಒಂದು ಹೊತ್ತಿನ ಊಟ ನೀಡಿ, ಸೂರು ಇಲ್ಲದ ಬಡವರಿಗೆ ಮನೆ ನಿರ್ಮಿಸಲು ಸಹಕಾರ ನೀಡಿ ಎಂದು ನಮ್ಮೆಲ್ಲರಿಗೂ ಯಾವಾಗಲೂ ಹೇಳುತಿದ್ದರು. ಗುರುವಾಯನಕೆರೆ ನವಶಕ್ತಿ ಮನೆಗೆ ಯಾರೂ ಬಂದರೂ ಊಟ ಮಾಡಿದ್ರ ,ತಿಂಡಿ ತಿಂದ್ರ ಎಂಬುವುದೇ ಅಮ್ಮನ ಮೊದಲ ಮಾತಾಗಿತ್ತು.

ಅಮ್ಮನ ಆಸೆಯಂತೆ ಇವತ್ತು ಅವರ ಆಶೀರ್ವಾದದಲ್ಲಿ ಒಂದಷ್ಟು ಬಡ ಕುಟುಂಬಗಳಿಗೆ ಆಸರೆಯಾಗಬೇಕು ಎಂಬ ನಿಟ್ಟಿನಲ್ಲಿ “ಕಾಶಿಸದನ” ವಸತಿ ಯೋಜನೆಗಳಿಗೆ ಚಾಲನೆ ನೀಡುವುದರೊಂದಿಗೆ ಅಮ್ಮನ ಕನಸು ಈಡೇರಿಸುವ ಕೆಲಸವನ್ನು ಮಾಡುತಿದ್ದೇನೆ.
ಬೆಳ್ತಂಗಡಿ ತಾಲೂಕಿನ ಅಶಕ್ತ 9 ಬಡ ಕುಟುಂಬಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅವರಿಗೆ ಗರಿಷ್ಠ ಮಟ್ಟದ ಆರ್ಥಿಕ ಸಹಕಾರ ಅದೇ ರೀತಿ ಬಂಟರ ಸಂಘ ಸೇರಿದಂತೆ ವಿವಿಧ ದಾನಿಗಳ ಮೂಲಕ ಉತ್ತಮವಾದ ಸುಸಜ್ಜಿತ ಮನೆ ನಿರ್ಮಿಸಿ ಹಸ್ತಾಂತರಿಸುವ ಯೋಜನೆ ಇದಾಗಿದ್ದು,ಮನೆ ಕೆಲಸ ಪ್ರಾರಂಭಿಸಿ 4 ತಿಂಗಳೊಳಗೆ ಮನೆ ಪೂರ್ತಿ ಗೊಳಿಸುವಂತೆಯೂ ಸೂಚಿಸಲಾಗಿದೆ ಎಂದರು.

ಈ ವೇಳೆ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಸುರೇಶ್ ಶೆಟ್ಟಿ ಸೂರ್ಯಶ್ರೀ, ಉದ್ಯಮಿಗಳು ಹೊಸ್ಮಾರು, ವಿಜಯ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಜಯಂತ ಶೆಟ್ಟಿ ಕುಂಟಿನಿ ಬಂಟರ ಯಾನೆ ನಾಡವರ ಮಾತೃ ಸಂಘ ಸಂಚಾಲಕ ಜಯಾರಾಮ ಭಂಡಾರಿ ಧರ್ಮಸ್ಥಳ, ತಾಲೂಕು ಬಂಟರ ಸಂಘದ ಸಂಘಟನಾ ಸಂಚಾಲಕ ರಘುರಾಮ ಶೆಟ್ಟಿ ಸಾಧನ ಉಜಿರೆ, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಕೋಶಾಧಿಕಾರಿ ವಸಂತ ಶೆಟ್ಟಿ ಶ್ರದ್ದಾ, ನ್ಯಾಯವಾದಿ ನವೀನ್ ಶೆಟ್ಟಿ ಕೊಕ್ರಾಡಿ, ಸಚಿನ್ ಶೆಟ್ಟಿ ಕುರೆಲ್ಯ,ನಾರಾವಿ ವಲಯ ಸಮಿತಿಯ ಕಾರ್ಯದರ್ಶಿ ಶಿವಣ್ಣ ಶೆಟ್ಟಿ, ಕೋಶಾಧಿಕಾರಿ ಜಯ ಶೆಟ್ಟಿ ಪೆರಾಡಿ, ಕೊಕ್ರಾಡಿ ಗ್ರಾಮ ಸಮಿತಿ ಅಧ್ಯಕ್ಷ ಪವನ್ ಕುಮಾರ್ ಶೆಟ್ಟಿ, ರವಿ ಶೆಟ್ಟಿ ಸುಲ್ಕೇರಿ, ಕಾರ್ಯದರ್ಶಿ ವಿಕ್ಕಿ ಶೆಟ್ಟಿ ಜಂತಿಗೋಳಿ, ಹಿರಿಯರಾದ ರಾಜು ಶೆಟ್ಟಿ ಪೊನ್ನೆಮಾರಡ್ಡ ಹಾಗೂ ಬಂಟ ಸಮಾಜದ ವಲಯ ಸಮಿತಿ ಮತ್ತು ಗ್ರಾಮ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು ವಲಯ ಸಮಿತಿಯ ಅಧ್ಯಕ್ಷ ರಾಜೇಶ್ ಶೆಟ್ಟಿ ಪೆರಾಡಿ ಧನ್ಯವಾದವಿತ್ತರು. ಕೊನೆಯಲ್ಲಿ “ಕಾಶಿ ಸದನ” ವಸತಿ ಯೋಜನೆಯ ಫಲಾನುಭವಿಯಾದ ಶ್ರೀಮತಿ ಗಿರಿಜಾ ಶೆಟ್ಟಿಯವರ ಮನೆಯವರು ಬಂದಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

error: Content is protected !!