ಬೆಳ್ತಂಗಡಿ;ತಾಲೂಕಿನ ಭಜನಾ ಮಂಡಳಿಗಳನ್ನು ಉತ್ತೇಜಿಸುವ ದೃಷ್ಠಿಯಿಂದ, ಯುವ ಜನತೆಯಲ್ಲಿ ಸಧ್ವಿಚಾರ ಧಾರೆಯನ್ನು, ಧಾರ್ಮಿಕ ಜಾಗೃತಿಯನ್ನು ಪ್ರೇರೇಪಿಸುವ ಸದಾಶಯದೊಂದಿಗೆ
ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ವೇಣೂರು ಪ್ರಖಂಡ ಮತ್ತು ಶ್ರಮಿಕ ಸೇವಾ ಟ್ರಸ್ಟ್ ಬೆಳ್ತಂಗಡಿ ನೇತೃತ್ವದಲ್ಲಿ ತಾಲೂಕಿನ ಭಜನಾ ಮಂಡಳಿಗಳಿಗೆ ಆಯೋಜಿಸಿದ ಭಜನಾ ಸ್ಪರ್ಧೆಗಳ ಸಮಾರೋಪ ಸಮಾರಂಭವು ಮಾ 01 ರ ಸಂಜೆ 6 ಗಂಟೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉಪಸ್ಥಿತಿಯಲ್ಲಿ ವೇಣೂರಿನ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.2022 ನೇ ಜನವರಿ 14 ರಂದು ಸ್ಪರ್ಧೆ ಪ್ರಾರಂಭವಾಗಿ ಮಾರ್ಚ್ ವರೆಗೆ ನಡೆದಿತ್ತು.
ಕುಕ್ಕೇಡಿಯ ಬುಳೆಕ್ಕರ ಶಾರದಾಂಭ ಭಜನಾ ಮಂಡಳಿ ವಠಾರದಲ್ಲಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಸ್ಪರ್ಧೆಗೆ ಚಾಲನೆ ನೀಡಿದ್ದರು.
ತಾಲೂಕಿನ 21 ಭಜನಾ ಮಂಡಳಿಗಳಿಂದ ಪುರುಷರು,ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 63 ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.ಮಾ 01 ರಂದು
ವೇಣೂರಿನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಥಮ ಬಹುಮಾನ ರೂ 5 ಲಕ್ಷ, ದ್ವಿತೀಯ ಬಹುಮಾನ 2.5 ಲಕ್ಷ ,ಹಾಗೂ ಉತ್ತಮ ಪ್ರದರ್ಶನ ನೀಡಿದ 5 ತಂಡಗಳಿಗೆ ತಲಾ 1 ಲಕ್ಷ ರೂ ಸಿಗಲಿದೆ.