ಧರ್ಮಸ್ಥಳಕ್ಕೆ ಸಂಸದ ತೇಜಸ್ವಿ ಸೂರ್ಯ ಭೇಟಿ, ಸೆಲ್ಪಿಗಾಗಿ ಮುಗಿಬಿದ್ದ ಜನತೆ: ಮಂಜುನಾಥ ಸ್ವಾಮಿ ದರ್ಶನ ಪಡೆದು, ಧರ್ಮಾಧಿಕಾರಿ ಡಾ.ಡಿ ಹೆಗ್ಗಡೆಯವರ ಜೊತೆ ಮಾತುಕತೆ

ಬೆಳ್ತಂಗಡಿ : ಸಂಸದ ತೇಜಸ್ವಿ ಸೂರ್ಯ ಫೆ.27 ರಂದು ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಳಿಕ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಬಳಿಕ ಧರ್ಮಸ್ಥಳದಿಂದ ವಿವಿಧ ದೇವಸ್ಥಾನಗಳಿಗೆ ನೀಡುವ ಧನಸಹಾಯಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡರು. ಸುಮಾರು 15 ನಿಮಿಷ ನಿಂತುಕೊಂಡೆ ಭಕ್ತರೆಲ್ಲರು ಧರ್ಮಾಧಿಕಾರಿಗಳನ್ನು ಭೇಟಿ ಮಾಡಿ ಮಾತಾನಾಡುವ ದೃಶ್ಯಗಳನ್ನು ನೋಡಿ ಸಂತೋಷ ಪಟ್ಟರು.

ಕ್ಷೇತ್ರದಲ್ಲಿ ಸಂಸದರನ್ನು ಕಂಡ ಭಕ್ತರು ಸೆಲ್ಪಿಗೆ ಮುಗಿಬಿದ್ದಿದ್ದರು. ಭಕ್ತರನ್ನು ನೋಡಿ ನಮಸ್ಕಾರಿಸಿದ ಸಂಸದ ತೇಜಸ್ವಿ ಸೂರ್ಯ ಸಂತೋಷದಿಂದ ಮಾತನಾಡಿಸಿದ್ದಾರೆ. ಈ ವೇಳೆ ಧರ್ಮಸ್ಥಳದ ಮ್ಯಾನೇಜರ್ ಪಾರ್ಶ್ವನಾಥ್ ಜೈನ್ ಮತ್ತು ದೀಕ್ಷಿತ್ ದೇವರ ದರ್ಶನಕ್ಕೆ ಸಹಕರಿಸಿದರು.

error: Content is protected !!