ಬೆಳ್ತಂಗಡಿ ಪೊಲೀಸರಿಂದ ಉಜಿರೆ ಲಾಡ್ಜ್ ಗಳ ತಪಾಸಣೆ: ಇನ್ಸ್ಪೆಕ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ದಾಖಲೆ ಪರಿಶೀಲನೆ

ಬೆಳ್ತಂಗಡಿ : ಅಕ್ರಮಗಳ ಮೇಲೆ ನಿಗಾ ಇರಿಸಿಕೊಂಡು ಮತ್ತೆ ಲಾಡ್ಜ್ ಗಳ ದಾಖಲೆಗಳನ್ನು ತಪಾಸಣೆ ಮಾಡಿ
ಬೆಳ್ತಂಗಡಿ ಇನ್ಸ್ಪೆಕ್ಟರ್ ಸತ್ಯನಾರಾಯಣ ಮತ್ತು ತಂಡ
ಸೂಕ್ತ ಎಚ್ಚರಿಕೆಯ ಸಂದೇಶ ನೀಡಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆಯ ಸುಮಾರು ಏಂಟು ಲಾಡ್ಜ್ ಗಳ ಮೇಲೆ ಬಂಟ್ವಾಳ ಡಿವೈಎಸ್ಪಿರವರ ಮಾರ್ಗದರ್ಶನ ಪಡೆದು ಬೆಳ್ತಂಗಡಿ ಇನ್ಸ್ಪೆಕ್ಟರ್ ಸತ್ಯನಾರಾಯಣ ಮತ್ತು ತಂಡ ಫೆ.25 ರಂದು ಸಂಜೆ 6 ಗಂಟೆಗೆ ಎಲ್ಲಾ ಲಾಡ್ಜ್ ಗಳಲ್ಲಿ ಪ್ರತಿ ರೂಂಗಳನ್ನು ಪರಿಶೀಲನೆ ನಡೆಸಿದ ಬಳಿಕ ಎಂಟ್ರಿ ಪುಸ್ತಕಗಳನ್ನು ಪರಿಶೀಲನೆ ಮಾಡಿದ್ದಾರೆ. ಆದರೆ ಯಾವ ಲಾಡ್ಜ್ ಗಳಲ್ಲಿ ಅನೈತಿಕ ಚಟುವಟಿಕೆಗಳು ಪತ್ತೆಯಾಗಿಲ್ಲ. ಅದಲ್ಲದೆ ಲಾಡ್ಜ್ ಮಾಲೀಕರಿಗೆ ಖಡಕ್ ಎಚ್ಚರಿಕೆ ಸಂದೇಶ ನೀಡಿ ತೆರಳಿದ್ದಾರೆ.

ಕಾರ್ಯಾಚರಣೆಯಲ್ಲಿ ಖಡಕ್ ಆಫೀಸರ್ ಆಗಿರುವ ಬೆಳ್ತಂಗಡಿ ಇನ್ಸ್ಪೆಕ್ಟರ್ ಸತ್ಯನಾರಾಯಣ ಮತ್ತು ಸಿಬ್ಬಂದಿ ಹಾಗೂ ಮಹಿಳಾ ಸಿಬ್ಬಂದಿ ಭಾಗಿಯಾಗಿದ್ದರು.

error: Content is protected !!