ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ವೇಣೂರು: 7ನೇ ದಿನದ ವಿಜೃಂಭಣೆಯ ಬ್ರಹ್ಮಕಲಶೋತ್ಸವ: ಯಕ್ಷಗಾನ, ಹಾಸ್ಯ, ಸಂಗೀತ ರಸಮಂಜರಿ ಕಾರ್ಯಕ್ರಮ…

ವೇಣೂರು: ಇತಿಹಾಸ ಪ್ರಸಿದ್ಧ ವೇಣೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಇಂದು (ಫೆ.25) 7 ದಿನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಬೆಳಗ್ಗೆ 8:00 ಗಂಟೆಯಿಂದ ವೈದಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆಯುತ್ತಿದ್ದಾರೆ. 11 ಗಂಟೆಯಿಂದ ‘ದೇವಾಲಯದ ಮಹತ್ವ’ ಎಂಬ ವಿಚಾರದ ಕುರಿತಾಗಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಇವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದ್ದು, ಸಂಜೆ 4:30ರಿಂದ ಸುಬ್ರಹ್ಮಣ್ಯ ದೇವರ ಪ್ರಾಯಶ್ಚಿತ್ತ ಹೋಮ, ಪಾಶುಪತಾಸ್ತçಹೋಮ, ಅಂಕುರ ಪೂಜೆ ನಡೆಯಲಿದೆ.

ರಾತ್ರಿ 7ರಿಂದ ಸಚಿವ ವಿ, ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಮೂಡಬಿದಿರೆಯ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಕಾರ್ಯಕ್ರಮಕ್ಕೆ ಶುಭ ಕೋರಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ದೇವೇಂದ್ರ ಹೆಗ್ಡೆ, ಕುಕ್ಕೇಡಿ ರಾಜ್ಯಗುತ್ತು ಎನ್, ಜೆ ಕಡಂಬ , ಕಲ್ಕಡ್ತಿಮಾರು ನರಸಿಂಹ ಭಟ್, ವೇಣೂರು ವಲಯ ಅರಣ್ಯಾಧಿಕಾರಿ ಮಹಿಮ್ ಎಂ ಜನ್ನು, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕರುಣಾಕರ ಸುವರ್ಣ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 1 ಗಂಟೆಯಿಂದ ಜಿಲ್ಲೆಯ ಹೆಸರಾಂತ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ “ಶಿವಭಕ್ತ ವೀರಮಣಿ” ಮೂಡಿಬರಲಿದ್ದು, ಸಂಜೆ 5ರಿಂದ ತೆಲಿಕೆದ ತೆನಾಲಿ ಸುನೀಲ್ ನೆಲ್ಲಿಗುಡ್ಡೆ ಮತ್ತು ತಂಡದಿಂದ ‘ತೆಲಿಕೆದ ಬರ್ಸ’ ಹಾಸ್ಯಮಯ ಕಾರ್ಯಕ್ರಮ ನಡೆಯಲಿದೆ, ರಾತ್ರಿ 7ರಿಂದ ಯಕ್ಷಗಂಧ ಮಹಿಳಾ ಯಕ್ಷಗಾನ ಮಂಡಳಿ ಉಜಿರೆ ಇವರಿಂದ ‘ಮಕರಾಕ್ಷ ಕಾಳಗ ಯಕ್ಷಗಾನ’ ಹಾಗೂ ರಾತ್ರಿ 9:30 ರಿಂದ ಅಜಯ್ ವಾರಿಯರ್ ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕರ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳು ಪ್ರಜಾಪ್ರಕಾಶ ನ್ಯೂಸ್ ಯೂಟ್ಯೂಬ್ ಚಾನೆಲ್ ನಲ್ಲಿ ನಿರಂತರ ನೇರಪ್ರಸಾರವಾಗಲಿದೆ.

error: Content is protected !!