ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಗುರುದೇವ ಶ್ರೀ ಶ್ರೀ ರವಿಶಂಕರ್ ಗುರೂಜಿ ಭೇಟಿ: ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಕಾರ್ಯ ದೇಶಕ್ಕೆ, ಧರ್ಮಕ್ಕೆ ಹಿರಿಮೆ:

 

 

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆರ್ಟ್ ಆಫ್ ಲಿವಿಂಗ್ ಸ್ಥಾಪಕರಾದ ಗುರುದೇವ ಶ್ರೀ ಶ್ರೀ ರವಿಶಂಕರ್ ಗುರೂಜಿ ಫೆ.19 ರಂದು ಸಂಜೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಅಗಮಿಸಿದರು.

ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿದ ಬಳಿಕ ಸುಮಾರು 25 ನಿಮಿಷ ನದಿಯ ದಡದಲ್ಲಿ ಜಪ ಮಾಡಿದರು ಅಲ್ಲಿಂದ ನೇತ್ರಾವತಿ ನದಿ ವೀಕ್ಷಿಸಿ ನೇರವಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.

ದೇವರ ದರ್ಶನ ಬಳಿಕ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಅನ್ನಪೂರ್ಣ ಅನ್ನಛತ್ರಕ್ಕೆ ಭೇಟಿ ನೀಡಿದ ಬಳಿಕ ಸನ್ನಿಧಿ ವಸತಿ ಗೃಹದಲ್ಲಿ ವಾಸ್ತವ್ಯ ಮಾಡಿ ಫೆ.20 ಸೋಮವಾರ ಬೆಳಿಗ್ಗೆ ಮತ್ತೆ ಮಂಜುನಾಥ ಸ್ವಾಮಿಯ ದರ್ಶನ ಪಡೆದು ನೇರವಾಗಿ ಕಾರಿನಲ್ಲಿ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಬೆಂಗಳೂರು ಆಶ್ರಮಕ್ಕೆ ವಾಪಸ್ ಹೋಗಲಿದ್ದಾರೆ.

ಈ ಸಂದರ್ಭದಲ್ಲಿ ಮಾತಾನಾಡಿದ ಅವರು ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆ, ಪ್ರಾಮುಖ್ಯತೆ ಬಗ್ಗೆ ದೇಶ ವಿದೇಶಗಳಲ್ಲೂ ಪ್ರಸಿದ್ಧಿಯನ್ನು ಪಡೆದಿದೆ. ಜನರ ಕಷ್ಟ ಸುಖಗಳನ್ನು ಭಗವಂತನಲ್ಲಿ ಕೋರಿ ಹರಕೆ ಮಾಡಿಕೊಂಡು ಮನೆಯಲ್ಲಿರುವ ಎಲ್ಲಾ ವ್ಯಾಜ್ಯಗಳನ್ನು ಬಗೆಹರಿಸಿಕೊಂಡು ಮನಸ್ಸಿಗೆ ನೆಮ್ಮದಿ ತಂದುಕೊಳ್ಳುವುದು. ಧರ್ಮಾಧಿಕಾರಿಗಳು ಬಹಳಷ್ಟು ಸಮಾಜ ಸೇವೆಗಳಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ರಾಜ್ಯ ಸಭಾ ಸದಸ್ಯರು ಅಗಿದ್ದಾರೆ ಆ ಬಳಿಕ ಭೇಟಿಯಾಗಿಲ್ಲ ಇಂದು ಭೇಟಿಯಾಗಿದ್ದೇನೆ. ಅವರಿಂದ ತುಂಬಾ ಒಳ್ಳೆಯ ಕೆಲಸಗಳು ನಡೆಯುತ್ತಿರುವುದು ತುಂಬಾ ಸಂತೋಷ ತಂದಿದೆ ಇದು ನಮ್ಮ ದೇಶಕ್ಕೆ ಧರ್ಮಕ್ಕೆ ಹಿರಿಮೆ ಗರಿಮೆ ಎಂದು ತಿಳಿಸಿದರು.

ಧರ್ಮಸ್ಥಳ ಅಗಮಿಸಿದಾಗ ಹರ್ಷೇಂದ್ರ ಕುಮಾರ್ ಮತ್ತು ಸುರೇಂದ್ರ ಕುಮಾರ್ ಸ್ವಾಗತಿಸಿಕೊಂಡರು, ಕೃಷ್ಣ ಸಿಂಗ್, ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ವಿ ಶೆಟ್ಟಿ , ಕೆ.ಎನ್.ಜನಾರ್ದನ್ , ಮ್ಯಾನೇಜರ್ ಪಾರ್ಶ್ವನಾಥ್ ಜೈನ್ ಮತ್ತಿತರರು ಗುರೂಜಿ ಜೊತೆಯಲ್ಲಿದ್ದರು.

error: Content is protected !!