ಕೊಕ್ರಾಡಿ ಪಿಕಪ್ ವಾಹನ, ಬೈಕ್ ಗೆ ಡಿಕ್ಕಿ, ವಿದ್ಯಾರ್ಥಿ ಸಾವು

 

 

 

 

ಬೆಳ್ತಂಗಡಿ: ಕೋಳಿ ಸಾಗಾಟದ ಪಿಕಪ್ ವಾಹನ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ರಾಡಿ ಬಳಿ ಇಂದು ಬೆಳಿಗ್ಗೆ ನಡೆದಿದೆ.ಮೃತ ವಿದ್ಯಾರ್ಥಿಯನ್ನು ಕೊಕ್ರಾಡಿ ಸಮೀಪದ ಉಜ್ವಲ್ (19) ಎಂದು ಗುರುತಿಸಲಾಗಿದೆ.ಉಜ್ವಲ್ ಪ್ರತಿದಿನ
ಮೂಡಬಿದಿರೆ ಕಾಲೇಜಿಗೆ ಹೋಗಲು  ಮನೆಯಿಂದ ಒಂದು ಕಿ.ಮೀ ದೂರದ ಕುಂಟಲಕಟ್ಟೆ ಎಂಬಲ್ಲಿಯವರೆಗೆ ಬೈಕಿನಲ್ಲಿ  ತೆರಳಿ  ಅಲ್ಲಿಂದ  ಬಸ್ಸಿನಲ್ಲಿ  ತೆರಳುತಿದ್ದರು. ಅದರೆ ಇಂದು ಬೆಳಗ್ಗೆ  ಕೊಲ್ಯಕಾರ್ ಎಂಬಲ್ಲಿ  ವಿದ್ಯಾರ್ಥಿಗೆ ಮೂಡಬಿದ್ರೆಯಿಂದ ಬೆಳ್ತಂಗಡಿ ಕಡೆಗೆ ಬರುತಿದ್ದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಉಜ್ವಲ್ ಅವರು  ಗಂಭೀರ ಗಾಯಗೊಂಡಿದ್ದು ತಕ್ಷಣ ಬೆಳ್ತಂಗಡಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆವಾಗಲೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕೋಳಿ ಸಾಗಾಟದ  ಪಿಕಪ್ ವಾಹನ ಬೆಳ್ತಂಗಡಿಯದ್ದೆಂದು ತಿಳಿದು ಬಂದಿದೆ.

error: Content is protected !!