ಉಜಿರೆ ಲಾಡ್ಜ್ ಮೇಲಿನ ದಾಳಿ ಪ್ರಕರಣ: ನಾಲ್ವರ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಉಜಿರೆಯ ಎಮ್.ಎಸ್.ಎಸ್ ಲಾಡ್ಜ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಧೆಯ ಕಿಂಗ್ ಪಿನ್ ಸಹೋದರರಾದ ಸುರೇಶ್ ಪೂಜಾರಿ ಮತ್ತು ರಮೇಶ್ ಪೂಜಾರಿ ಸೇರಿ ಒಟ್ಟು ನಾಲ್ಕು ಜನರ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ.

ಫೆ.07ರಂದು ಬೆಳ್ತಂಗಡಿ ಪೊಲೀಸರು ಪಕ್ಕಾ ಮಾಹಿತಿ ಆಧರಿಸಿ ಇನ್ಸ್ ಪೆಕ್ಟರ್ ಸತ್ಯನಾರಾಯಣ.ಕೆ ಮತ್ತು ಸಬ್ ಇನ್ಸ್ ಪೆಕ್ಟರ್ ಅರ್ಜುನ್ ಹಾಗೂ ಠಾಣಾ ಸಿಬ್ಬಂದಿಗಳು ಮತ್ತು ಇಬ್ಬರು ಪಂಚಾಯತುದಾರರೊಂದಿಗೆ ಲಾಡ್ಜ್ ಗೆ ದಾಳಿ ನಡೆಸಿದ್ದರು. ಈ ವೇಳೆ ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದ ಆರೋಪಿಗಳಾದ ಸಂತೋಷ್ ಮತ್ತು ಇರ್ಷಾದ್.ಪಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ನೊಂದ ಐದು ಮಂದಿ ಮಹಿಳೆಯರನ್ನು ರಕ್ಷಿಸಲಾಗಿತ್ತು. ಸದ್ಯ ವೇಶ್ಯಾವಾಟಿಕೆಯ ಕಿಂಗ್ ಪಿನ್ ಗಳಾದ ಸುರೇಶ್ ಪೂಜಾರಿ, ರಮೇಶ್ ಪೂಜಾರಿ, ಸಂತೋಷ್ ಮತ್ತು ಇರ್ಷಾದ್.ಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

error: Content is protected !!