ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವ್ಯಕ್ತಿ ಸೆರೆ: ಬೆಳ್ತಂಗಡಿ ಪೊಲೀಸರಿಂದ ಕಾರ್ಯಾಚರಣೆ, ಕಾಸರಗೋಡಿನಲ್ಲಿ ಬಂಧನ..

 

 

ಬೆಳ್ತಂಗಡಿ : ಸ್ನೇಹಿತನನ್ನು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಬಂಧನವಾಗಿದ್ದು ನಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಬಳಿಕ ಕಳೆದ ಒಂದು ವರ್ಷದಿಂದ ಕೋರ್ಟ್‌ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಕೇರಳ ರಾಜ್ಯದ ಕಾಸರಗೋಡ್ ಜಿಲ್ಲೆಯ  ಉಪ್ಪಳ  ಮೊಳಿಂಜೆ ಗ್ರಾಮದ ಮಾಹಿ ನಗರದ ಇಸುಬು ಎಂಬವರ ಮಗನಾದ ಸಿರಾಜ್(28) ಎಂಬಾತನನ್ನು ಫೇ.7 ರಂದು ಆತನ ಮನೆಯ ಸಮೀಪದಿಂದ ಬೆಳ್ತಂಗಡಿ ಪೊಲೀಸ್ ಇನ್ಸ್ಪೆಕ್ಟರ್ ಸತ್ಯನಾರಾಯಣ.ಕೆ ಹಾಗೂ ಸಬ್ ಇನ್ಸ್ಪೆಕ್ಟರ್ ಅರ್ಜುನ್ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ವೃಷಭ್ , ಬೆನ್ನಿಚ್ಚನ್, ಬಸವರಾಜ್ ರವರು ಬಂಧಿಸಿದ್ದಾರೆ.

error: Content is protected !!