ತಾಲೂಕು ಮಟ್ಟದ ವಿಶೇಷ ಚೇತನರ ವಿವಿದೋದ್ದೇಶ ಹಾಗೂ ಗ್ರಾಮೀಣ/ನಗರ ಪುನರ್ವಸತಿ ಕಾರ್ಯಕರ್ತರ ಮಾಸಿಕ ಸಭೆ: ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ತಾಲೂಕು ಮಟ್ಟದ ವಿಶೇಷ ಚೇತನರ ವಿವಿದೋದ್ದೇಶ ಹಾಗೂ ಗ್ರಾಮೀಣ/ನಗರ ಪುನರ್ವಸತಿ ಕಾರ್ಯಕರ್ತರ ಮಾಸಿಕ ಸಭೆ ಫೆ.7ರಂದು ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಭಾ ಭವನದಲ್ಲಿ ನಡೆಯಿತು.

ತಾಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ಸಂಯೋಜಕ ಜಿಲ್ಲಾಧ್ಯಕ್ಷ ಜೋನ್ ಬ್ಯಾಪ್ಟಿಸ್ಟ್ ಡಿ’ಸೋಜಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಶೇಷಚೇತನರ ಯು.ಡಿ.ಐ.ಡಿ. ಕುರಿತ ಚರ್ಚೆ ನಡೆದು ಬಾಕಿಯಾದ ವಿಶೇಷಚೇತನರಿಗೆ ಯು. ಡಿ. ಐ. ಡಿ. ಮಾಡಲು ಇರುವ ಅನೇಕ ಸುಲಭ ಮಾರ್ಗಗಳ ಬಗ್ಗೆ ಚರ್ಚಿಸಿ ವಿಶೇಷಚೇತನರನ್ನು ಶೀಘ್ರವಾಗಿ ಗುರುತಿಸಿ ಚೀಟಿ ನೀಡಲು ಸೂಚಿಸಲಾಯಿತು. ವಿಶೇಷಚೇತನರ ತಾಲೂಕು ಸಭಾಭವನ ಮಾಡಿಸುವಂತೆ ಬೆಳ್ತಂಗಡಿ ಶಾಸಕರಲ್ಲಿ ಮನವಿ ನೀಡಲು ತಿರ್ಮಾನಿಸಲಾಯಿತು.
ಸಭೆಯಲ್ಲಿ ತಾಲೂಕು ಮಟ್ಟದ ವಿವಿದೋದ್ಧೇಶ ಹಾಗೂ ಗ್ರಾಮೀಣ/ನಗರ ಪುನರ್ವಸತಿ ಕಾರ್ಯಕರ್ತರ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷೆಯಾಗಿ ಕುವೆಟ್ಟು ಗ್ರಾ.ಪಂ. ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಸುಲೋಚನಾ, ಉಪಾಧ್ಯಕ್ಷರಾಗಿ ಧರ್ಮಸ್ಥಳದ ಹರೀಶ್, ಕಾರ್ಯದರ್ಶಿಯಾಗಿ ಚಾರ್ಮಾಡಿಯ ಚೇತನ್, ಖಜಾಂಚಿಯಾಗಿ ಸುಲ್ಕೇರಿಯ ಸುಪ್ರಿಯಾ, ಪತ್ರಿಕಾ ವರದಿಗಾರನಾಗಿ ಕಣಿಯೂರಿನ ಚಿರಂಜೀವಿ ಶೆಟ್ಟಿ ನಾಳ ಆಯ್ಕೆಯಾದರು. ತಾಲೂಕಿನ 33 ಕಾರ್ಯಕರ್ತರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

error: Content is protected !!