ಫೆ.2 ರಿಂದ 9 ತುರ್ಕಳಿಕೆ ಉರೂಸ್, ನವೀಕೃತ ಮಸ್ಜಿದ್ ಉದ್ಘಾಟನೆ

 

 

ಬೆಳ್ತಂಗಡಿ; ದ. ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತುರ್ಕಳಿಕೆ ಮಿಫ್ತಾಹುಲ್ ಉಲೂಮ್ ಜುಮಾ ಮಸೀದಿಯ ಸಮೀಪ ಅಂತ್ಯ ವಿಶ್ರಮಗೊಂಡಿರುವ ಹಯಾತುಲ್ ಔಲಿಯಾ ದರ್ಗಾ ಶರೀಫ್‌ನ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮವು ಫೆ. 2 ರಿಂದ 9 ರ ವರೆಗೆ ಜರುಗಲಿದೆ ಎಂದು ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ತಿಳಿಸಿದರು.

ಬೆಳ್ತಂಗಡಿ ಪತ್ರಿಕಾಭವನದಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.
ದ.ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಅಸ್ಸಯ್ಯದ್‌ ಖುರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ಕೂತ್‌ರವರ ಅಧ್ಯಕ್ಷತೆಯಲ್ಲಿ ಎಲ್ಲ‌ ಕಾರ್ಯಕ್ರಮಗಳು ನಡೆಯಲಿದೆ. ಫೆ.2 ರಂದು 8 ಕ್ಕೆ ಅಸ್ಸಯ್ಯದ್ ಇಬ್ರಾಹಿಂ ಹಂಝ ಹಾದಿ ತಂಙಳ್ ಪಾಟ್ರಕೋಡಿ ನೇತೃತ್ವದಲ್ಲಿ, ದರ್ಗಾ ಝಿಯಾರತ್, ಸಂಜೆ 7 ಕ್ಕೆ ಅಸ್ಸಯ್ಯದ್ ಜಾಫರ್ ಸ್ವಾದಿಖ್ ತಂಙಳ್ ಕುಂಬೋ‌ಳ್ ರವರ ನೇತೃತ್ವದಲ್ಲಿ ಬೃಹತ್ ಜಲಾಲಿಯ ಮಜ್ಲಿಸ್, ಮುಹಮ್ಮದಾಲಿ ಸಖಾಫಿ ಸುರಿಬೈಲು ಇವರಿಂದ ಮುಖ್ಯಪ್ರಭಾಷಣ ಗೈಯ್ಯಲಿದ್ದಾರೆ. ಫೆ. 3 ರಂದು ಮಧ್ಯಾಹ್ನ 12ಕ್ಕೆ ಕೂರತ್ ತಂಙಳ್ ಅವರು ನವೀಕೃತ ಮಸೀದಿಯನ್ನು ಉದ್ಘಾಟಿಸಲಿದ್ದಾರೆ. ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಸಾದಾತ್ ತಂಙಳ್ ಉಪಸ್ಥಿತರಿರುತ್ತಾರೆ. ಪೇರೋಡು ಉಸ್ತಾದ್ ಮುಖ್ಯ ಪ್ರಭಾಷಣ ಗೈಯ್ಯಲಿದ್ದಾರೆ. ಅದೇ ದಿನ ಸಂಜೆ ಸಾಬಿತ್ ತಂಙಳ್ ತುಂಬೆತಡ್ಕ ದುವಾ ನೆರವೇರಿಸಿ, ಅಬ್ದುಸ್ಸಮದ್ ಅಮಾನಿ ಮತ್ತು ಶುಕೂರ್ ಇರ್ಫಾನಿ ಸಂಗಡಿಗರಿಂದ ಬುರ್ದಾ ಕಾರ್ಯಕ್ರಮ ನಡೆಯಲಿದೆ. ಫೆ.4 ರಂದು ಕರ್ಪಾಡಿ ತಂಙಳ್ ದುವಾ ನೆರವೇರಿಸಿ ನೌಫಳ್ ಸಖಾಫಿ ಕಳಸ ಮುಖ್ಯಪಭಾಷಣ ಗೈಯ್ಯಲಿದ್ದಾರೆ. ಫೆ.5 ರಂದು ಸಂಜೆ 6 ಗಂಟೆಗೆ ಕಲ್ಲೇರಿ ತಂಙಳ್ ದುವಾದೊಂದಿಗೆ ವಕ್ಫ್ ಮಂಡಳಿಯ ರಾಜ್ಯಾಧ್ಯಕ್ಷ ಶಾಫಿ ಸಅದಿ ಬೆಂಗಳೂರು ಅಧ್ಯಕ್ಷತೆಯಲ್ಲಿ ಸರ್ವಧರ್ಮ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಯು. ಟಿ. ಖಾದರ್, ರಮಾನಾಥ ರೈ ಮತ್ತು ಗಂಗಾಧರ ಗೌಡ, ಎಮ್.ಎಲ್.ಸಿ ಹರೀಶ್ ಕುಮಾರ್,ಮಾಜಿ ಶಾಸಕ ವಸಂತ ಬಂಗೇರ, ಐವನ್ ಡಿ’ಸೋಜ, ಕೆಪಿಸಿಸಿ‌ ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶಿವರಾಮ್, ಮಿಥುನ್ ರೈ, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್‌ ಸೇರಿದಂತೆ ಹಲವಾರು ಗಣ್ಯರು, ಧಾರ್ಮಿಕ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ.

ಫೆ.6.ರಂದು ಸಂಜೆ ಮುತ್ತುಕೋಯ ತಂಙಳ್ ಕಣ್ಣವಂ ದುವಾದೊಂದಿಗೆ ಗೂಡಲ್ಲೂರು ಮಸ್‌‌ಊದ್ ಸಖಾಫಿ ಮುಖ್ಯ ಪ್ರಭಾಷಣ ಗೈಯ್ಯಲಿದ್ದಾರೆ. ಫೆ.7. ರಂದು ಸಂಜೆ ವಾದಿ ಇರ್ಫಾನ್ ತಂಙಳ್ ದುವಾದೊಂದಿಗೆ ಅರೀಕೋಡ್ ಅಬೂಬಕ್ಕರ್ ಸಖಾಫಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ. ಫೆ.8 ರಂದು 8 ರಂದು ಮದಕ ಶಿಹಾಬುದ್ದೀನ್ ತಂಙಳ್ ದುವಾದೊಂದಿಗೆ ಪೇರೋಡು ಮುಹಮ್ಮದ್ ಅಝ‌್ಹರಿ ಮುಖ್ಯ ಪ್ರಭಾಷಣ ಗೈಯ್ಯಲಿದ್ದಾರೆ.

ಫೆ. 9 ರಂದು ಮಧ್ಯಾಹ್ನ 3ಕ್ಕೆ ಗಂಟೆಗೆ ಅಬ್ಬಾಸ್ ಸಅದಿ ಪೆರ್ನೆ ಉಸ್ತಾದ್ ನೇತೃತ್ವದಲ್ಲಿ ಖತ್ಮುಲ್ ಖರ್‌ ಆನ್ ಹಾಗೂ ಮೌಲಿದ್ ಪಾರಾಯಣ ಮತ್ತು ಸಂಜೆ 7ಕ್ಕೆ ಕೂರತ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಉರೂಸ್

ಸಮಾರೋಪ ಸಮಾರಂಭ ನಡೆಯಲಿದೆ. ಸಾದಾತ್ ತಂಙಳ್ ಉದ್ಘಾಟಿಸಲಿದ್ದಾರೆ. ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ದುವಾ ನೆರವೇರಿಸಿ ಲುಕ್ಮಾನುಲ್ ಹಕೀಮ್ ಸಖಾಫಿ ಪುಲ್ಲಾರ ಮುಖ್ಯ ಪ್ರಭಾಷಣ ಗೈಯ್ಯಲಿದ್ದಾರೆ. ಈ ಎಲ್ಲಾ ಸಮಾರಂಭಗಳಲ್ಲಿ ಹಲವಾರು ಮುಖಂಡರು ಭಾಗವಹಿಸಲಿದ್ದಾರೆಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಸ್ಜಿದ್ ಖತೀಬ್ ಅಬ್ದುಲ್‌ ಹಮೀದ್ ಸಖಾಫಿ, ಅಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ದಾವೂದ್ ಮೂರುಗೋಳಿ‌ ಮತ್ತು ಸಮಿತಿ ಸದಸ್ಯ ಅಬ್ದುಲ್ ರಶೀದ್ ಉಪಸ್ಥಿತರಿದ್ದರು.

error: Content is protected !!