ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಕಲ್ಲೇರಿಯಲ್ಲಿರುವ ಬಿ.ಎಸ್.ಎನ್.ಎಲ್ ಸಂಸ್ಥೆಯ ಬ್ಯಾಟರಿಗಳನ್ನು ಯಾರೋ ಕಳ್ಳರು
ಜ.14 ರಿಂದ ಜ.16 ರ ಮಧ್ಯೆ ಅ ಕಟ್ಟಡದ ಬಾಗಿಲು ಬೀಗವನ್ನು ಮುರಿದು ಸುಮಾರು 80 ಸಾವಿರ ಮೌಲ್ಯದ 16 ಎಕ್ಸೆಡ್ 1000 ಎ.ಹೆಚ್ ಬ್ಯಾಟರಿಗಳನ್ನು ಕಳವುಮಾಡಿಕೊಂಡು ಹೋದ ಬಗ್ಗೆ ಬಿ.ಎಸ್.ಎನ್ ಎಲ್ ಸಂಸ್ಥೆಯ ಕಿರಿಯ ದೂರ ಸಂಪರ್ಕ ಅಧಿಕಾರಿಯಾದ ಶ್ರೀಮತಿ ಆಶಾ.ಡಿ.ರವರು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿತ್ತು.
ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್.ಡಿ ತಂಡದವರು ತಾಂತ್ರಿಕ ದಾಖಲೆಗಳ ಮೂಲಕ ಕಾರ್ಯಾಚರಣೆ ನಡೆಸಿ ಆರೋಪಿ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಕೊಟ್ಟಾರಕರ ತಾಲೂಕಿನ ಎಯುಕೋನ್ ಗ್ರಾಮದ ಜೆನಿಭವನ್ ನಿವಾಸಿ ಮಾದ್ರೂ ಪಣಿಕ್ಕರ್ ಅವರ ಮಗನಾದ ಇಟ್ಟೆಪಣಿಕ್ಕರ್ (57) ಬಂಧಿಸಿ ಕಳವು ಮಾಡಿದ್ದ ಸುಮಾರು 80 ಸಾವಿರ ಮಾಲ್ಯದ ಬ್ಯಾಟರಿಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡು ಆರೋಪಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಪ್ರಕರಣದಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್.ಡಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಜೇಶ್,ಪ್ರಶಾಂತ್, ಸತೀಶ ನಾಯ್ಕ ಜಿ,ಲಾರೆನ್ಸ್ ಪಿ.ಆರ್, ಮಹಮ್ಮದ್ ಅಸ್ಲಾಂ, ಮಲ್ಲಿಕಾರ್ಜುನ, ಹರೀಶ್ ಕೆ ಎಂ ಮತ್ತು ಚಾಲಕರಾದ ಲೊಕೇಶ್ ರವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.