ಸಾಂದರ್ಭಿಕ ಚಿತ್ರ
ಮಚ್ಚಿನ: ತಣ್ಣಿರುಪಂತ ಗ್ರಾಮದ ಅಳಕ್ಕೆ ಎಂಬಲ್ಲಿ ಹಾಡಹಗಲೇ ಚಿರತೆಯೊಂದು ನಾಯಿ ಮರಿಯನ್ನು ಹೊತ್ತೊಯ್ದ ಬಳಿಕ ಮಚ್ಚಿನ ಗ್ರಾಮದ ಪುಂಚಪಾದೆಯ ಸುತ್ತಮುತ್ತ ಈ ಚಿರತೆ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ರಾತ್ರಿ ಹಾಗೂ ಬೆಳ್ಳಂ ಬೆಳಗ್ಗೆ ಚಿರತೆ ಕೂಗುವ ಧ್ವನಿಯು ಇಲ್ಲಿಯ ಸುತ್ತಮುತ್ತಲಿನ ಮನೆಯವರಿಗೆ ಕೇಳುತ್ತಿದ್ದು, ಈ ವೇಳೆ ಮನೆಯಲ್ಲಿದ್ದ, ನಾಯಿ, ಹಸುಗಳು ಗಾಬರಿಗೊಳ್ಳುತ್ತಿದೆ. ಪುಂಚಪಾದೆಯ ಸುತ್ತಮುತ್ತ ಕಾಡು ಪ್ರದೇಶವಾಗಿದ್ದು, ಪ್ರತೀ ವರ್ಷ ಈ ಕಾಡಿಗೆ ಹುಲಿ ಅಥವ ಚಿರತೆ ಬರುತ್ತಿದ್ದು, ಸಧ್ಯ ಚಿರತೆಯ ಧ್ವನಿ ಕೇಳಿದ ಇಲ್ಲಿನ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.