ಸರ್ವಧರ್ಮೀಯರ ಕ್ಷೇತ್ರ ಕಾಜೂರು ಫೆ.3 ರಿಂದ 12 ರವರೆಗೆ ಮಖಾಂ ಶರೀಫ್ ಉರೂಸ್: ಮಹಾ ಅನ್ನದಾನದೊಂದಿಗೆ ವಿಜೃಂಭಣೆಯ ಕಾರ್ಯಕ್ರಮ, ಹಲವಾರು ಗಣ್ಯರು ಭಾಗಿ:

 

 

 

ಬೆಳ್ತಂಗಡಿ; ನಾಡಿನ ಸರ್ವಧರ್ಮೀಯರ ಸಮನ್ವಯ ಕೇಂದ್ರವಾಗಿರುವ ಇತಿಹಾಸ ಪ್ರಸಿದ್ಧ ಕಾಜೂರು ಮಖಾಂ ಶರೀಫ್ ನಲ್ಲಿ ಈ ವರ್ಷದ ಉರೂಸ್ ಮಹಾ ಸಂಭ್ರಮವು ಫೆ.3 ರಿಂದ ಆರಂಭಗೊಂಡು ಫೆ.12 ರವರೆಗೆ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳ ಮೂಲಕ ನಡೆಯಲಿದೆ.ಎಂದು ಕಾಜೂರು ಆಡಳಿತ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಹೇಳಿದರು

 

 

ಅವರು ಜ 30 ಸೋಮವಾರ   ಬೆಳ್ತಂಗಡಿ ಪತ್ರಿಕಾಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ಉರೂಸ್ ಪ್ರಯುಕ್ತ 10 ದಿವಸಗಳಲ್ಲಿ ಪ್ರಖ್ಯಾತ ವಿದ್ವಾಂಸರಿಂದ ಧಾರ್ಮಿಕ ಪ್ರವಚನಗಳು, ಸರ್ವಧರ್ಮೀಯರ ಸಂಗಮ ಹಾಗೂ ಅನ್ನದಾನ ಇತ್ಯಾಧಿಗಳಿಗಾಗಿ ಅಭೂತಪೂರ್ವ ತಯಾರಿ ನಡೆಸಲಾಗಿದೆ.

 

 

 

 

 

ಕಾಜೂರು ಗೌರವಾಧ್ಯಕ್ಷ ಸಯ್ಯಿದ್ ಕುಂಬೋಳ್ ತಂಙಳ್, ಖಾಝಿ ಸಯ್ಯಿದ್ ಕೂರತ್ ತಂಙಳ್, ಸಯ್ಯಿದ್ ಕಾಜೂರು ತಂಙಳ್ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಸಂಪ್ರದಾಯದಂತೆ ಫೆ.3 ರಂದು ಕಿಲ್ಲೂರು ಜಮಾಅತ್ ನಿಂದ ಸಂದಲ್ ಮೆರವಣಿಗೆ ಆಗಮಿಸಿ, ಧ್ವಜಾರೋಹಣವನ್ನು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ನೆರವೇರಿಸಲಿದ್ದಾರೆ‌. ಖಾಝಿ ಸಯ್ಯಿದ್ ಕೂರತ್ ತಂಙಳ್ ಉಪಸ್ಥಿತಿಯಲ್ಲಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ಉದ್ಘಾಟನೆ ನಡೆಸಲಿದ್ದಾರೆ. ಇಸ್ಮಾಯಿಲ್ ತಂಙಳ್ ಸಹಿತ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ‌.
ಅಂದು ರಾತ್ರಿ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ನೇತೃತ್ವದಲ್ಲಿ “ಮದನಿಯಂ ಮಜ್ಲಿಸ್”,
ಫೆ. 4 ರಂದು ರಾತ್ರಿ ಕಾಜೂರು ತಂಙಳ್ ಉದ್ಘಾಟನೆಯ ಬಳಿಕ ಕಿಲ್ಲೂರು ಖತೀಬ್ ಬಿ.ಎಂ ಉಮರ್ ಅಶ್ರಫಿ ಮತಪ್ರವಚನ ನಡೆಸಲಿದ್ದಾರೆ.

 

ಫೆ.5 ರಂದು ಇಸ್ಲಾಮಿಕ್ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಅರಬಾನ, ನಹತ್, ಕವಾಲಿ,ರಿಫಾಯಿ ನಶೀದ, ದಫ್ಫ್ ಒಳಗೊಂಡ ಕೇರಳ ಸರಕಾರದ ‘ಫ್ಲಾಕ್‌ಲೋರ್ ಅಕಾಡಮಿ’ ಉಪಾಧ್ಯಕ್ಷ ಡಾ. ಉಸ್ತಾದ್ ಕೋಯಕಾಪಾಡ್ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ “ಇಶಲ್ ಪೋರಿಸ” ಕಾರ್ಯಕ್ರಮ ನಡೆಯಲಿದೆ.
ಫೆ. 6 ರಂದು ದಾರುಸ್ಸಲಾಂ ಬೆಳ್ತಂಗಡಿ ಚೇರ್ಮನ್ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಉಪಸ್ಥಿತಿಯಲ್ಲಿ ಹನೀಫ್ ನಿಝಾಮಿ ಕಾಸರಗೋಡು, ಫೆ.7 ರಂದು ರಫೀಕ್ ಸ‌ಅದಿ ದೇಲಂಪಾಡಿ ಉಪನ್ಯಾಸ ನಡೆಸಿಕೊಡಲಿದ್ದಾರೆ‌.

ಫೆ.8 ರಂದು ಕಾಜೂರು ಮಹಿಳಾ ಶರೀಅತ್ ಕಾಲೇಜಿನ ಪ್ರಥಮ‌ ಧಾರ್ಮಿಕ ಪದವಿ ಪ್ರದಾನ ಕಾರ್ಯಕ್ರಮ ನಡೆದು, ಖಾಝಿ ಮಾಣಿ ಉಸ್ತಾದ್,ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಉಪಸ್ಥಿತಿಯಲ್ಲಿ ನೌಫಲ್ ಸಖಾಫಿ ಕಳಸ ಪ್ರವಚನ‌ ನಡೆಸಿಕೊಡಲಿದ್ದಾರೆ‌.

ಫೆ.9 ರಂದು ಬೃಹತ್ ದಿಕ್ರ್ ಮಜ್ಲಿಸ್ ಅಧ್ಯಾತ್ಮಿಕ ಸಂಗಮ‌ ನಡೆಯಲಿದ್ದು, ಕಡಲುಂಡಿ ಶಿಹಾಬುದ್ದೀನ್ ಅಲ್ ಬುಖಾರಿ ತಂಙಳ್, ವಾದಿ ಇರ್ಫಾನ್ ತಂಙಳ್, ಗಂಜಿಮಠ ಅಸ್ಕರ್ ಬಿನ್ ಜಾನ್ ತಂಙಳ್, ಬೆಳಾಲು ತಂಙಳ್, ಎಸ್‌.ಎಂ ತಂಙಳ್, ಗುಲ್‌ರೇಝ್ ಅಹಮ್ಮದ್ ರಝ್ವಿ ಬೆಳ್ತಂಗಡಿ ಸಹಿತ ವಿದ್ವಾಂಸರು ಭಾಗವಹಿಸಲಿದ್ದಾರೆ.

 

 

ಫೆ. 10 ರಂದು ಮುತ‌ಅಲ್ಲಿಂ ಮತ್ತು ಉಲಮಾ ಸಮಾವೇಶ ನಡೆಯಲಿದ್ದು, ಕೆ.ಸಿ ರೋಡ್ ಉಸ್ತಾದ್ ಮುಖ್ಯ ಪ್ರಭಾಷಣ‌‌ ನಡೆಸಲಿದ್ದಾರೆ. ಹಿರಿಯ ಧಾರ್ಮಿಕ ವಿದ್ವಾಂಸರು ಭಾಗಿಯಾಗಲಿದ್ದಾರೆ.
ಫೆ.11 ರಂದು ಪುಲ್ಲಾರ ಲುಕ್ಮಾನುಲ್ ಹಕೀಂ ಸಖಾಫಿ ಉಪನ್ಯಾಸ ನಡೆಯಲಿದೆ. ಫೆ.12 ರಂದು ಬೆಳಿಗ್ಗೆ ಸಯ್ಯಿದ್ ಕುಂಬೋಳ್ ತಂಙಳ್ ಅಧ್ಯಕ್ಷತೆಯಲ್ಲಿ ಕಾಜೂರು ಮೌಲೀದ್, ಸಂದಲ್ ಮೆರವಣಿಗೆ, ಸಾಮೂಹಿಕ ಪ್ರಾರ್ಥನೆ, ಇತ್ಯಾಧಿ ನಡೆದು , ಇಳಿಸಂಜೆ ಸರ್ವಧರ್ಮೀಯರ ಸೌಹಾರ್ದ ಸಂಗಮ‌ ನಡೆಯಲಿದೆ. ಉದ್ಘಾಟನೆಯನ್ನು ಯೆನಪೋಯ ವಿವಿ ಕುಲಪತಿ ವೈ ಅಬ್ದುಲ್ಲಕುಂಞಿ ನಡೆಸಿದರೆ ಅಧ್ಯಕ್ಷತೆಯನ್ನು ವಕ್ಫ್ ಮಂಡಳಿ ರಾಜ್ಯಾಧ್ಯಕ್ಷ ಮೌಲಾನಾ ಎನ್‌ಕೆ‌ಎಮ್ ಶಾಫಿ ಸ‌ಅದಿ ಬೆಂಗಳೂರು ವಹಿಸಲಿದ್ದಾರೆ.
ಶಾಸಕ ಹರೀಶ್ ಪೂಂಜ,‌ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ.

 

ಅಬ್ದುಲ್ ಅಝೀಝ್ ದಾರಿಮಿ, ವಿಧಾನ ಸಭೆಯ ಪ್ರತಿಪಕ್ಷದ ಉಪನಾಯಕ ಯು.ಟಿ ಖಾದರ್, ಎಂ.ಎಲ್‌ಸಿ ಬಿ.ಎಮ್‌ ಫಾರೂಕ್, ಮಾಜಿ ಸಚಿವ ಬಿ.ಝೆಡ್ ಝಮೀರ್ ಅಹಮ್ಮದ್ ಖಾನ್, ಜಿಲ್ಲಾ ವಕ್ಫ್ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್,‌ ಅಲ್ ಇಂಡಿಯಾ ಕ್ಯಾಥಲಿಕ್‌ ಯೂನಿಯನ್ ರಾಜ್ಯಾಧ್ಯಕ್ಷ ಎಡ್ವಕೇಟ್ ಸೇವಿಯರ್ ಪಾಲೇಲಿ, ಡಾ. ಮುರಳಿಕೃಷ್ಣ ಇರ್ವತ್ರಾಯ ಸಂದೇಶ ನೀಡಲಿದ್ದಾರೆ.
ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಮತ್ತು ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ವಸಂತ ಬಂಗೇರ, ಮೊಯಿದಿನ್ ಬಾವಾ, ಮಾಜಿ‌ ಸಚಿವ ಕೆ ಗಂಗಾಧರ ಗೌಡ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಮಂಮ್ತಾಝ್ ಅಲಿ ಕೃಷ್ಣಾಪುರ, ಇನಾಯತ್ ಅಲಿ, ಬಿ.ಎಂ ಹಮೀದ್ ಹಾಜಿ ಉಜಿರೆ, ಬಿಜೆಪಿ ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್, ಕಾಜೂರು ಶಿಕ್ಷಣ ಸಂಸ್ಥೆಗಳ ಅಕಾಡಮಿಕ್ ಡೈರೆಕ್ಟರ್ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ವಕ್ಫ್ ಬೋರ್ಡ್ ಜಿಲ್ಲಾ ಉಪಾಧ್ಯಕ್ಷ ಫಕೀರಬ್ಬ ಮರೋಡಿ ಸಹಿತ ಪ್ರಮುಖ ಗಣ್ಯರುಗಳು, ವಕ್ಫ್ ಸದಸ್ಯರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಅಂದೇ ರಾತ್ರಿ ವಿಶ್ವಪ್ರಸಿದ್ಧ ಧಾರ್ಮಿಕ ಪಂಡಿತ, ಕೇರಳ ರಾಜ್ಯದ ಸಯ್ಯಿದ್ ಕಡಲುಂಡಿ ತಂಙಳ್ ನೇತೃತ್ವದಲ್ಲಿ ಉರೂಸ್ ಸಮಾರೋಪ ನಡೆಯಲಿದ್ದು, ಸಯ್ಯಿದ್ ಕಾಜೂರು ತಂಙಳ್, ಡಾ‌. ಕಾವಳಕಟ್ಟೆ ಹಝ್ರತ್,‌ ಮರ್‌ಹೂಮ್ ಕಾಜೂರು ತಂಙಳ್ ಸಹೋದರ ಸೈದಲವಿ ಕೋಯ ಜಮಲುಲ್ಲೈಲಿ ತಂಙಳ್ ಸೇರಿದಂತೆ ಅವರ ಕುಟುಂಬದ ಸದಸ್ಯರುಗಳು, ಎಸ್‌ವೈಎಸ್ ರಾಜ್ಯಾಧ್ಯಕ್ಷ ಡಾ. ಝೈನಿ ಕಾಮಿಲ್ ಸಖಾಫಿ, ಕಣಚೂರು ಮೋನು ಹಾಜಿ ಸಹಿತ ಪ್ರಮುಖರು ಭಾಗವಹಿಸಲಿದ್ದಾರೆ. ಡಾ. ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಕೇರಳ ಮತಪ್ರವಚನ ನಡೆಸಲಿದ್ದಾರೆ.

ಉರೂಸಿನ ಎಲ್ಲಾ ದಿನಗಳಲ್ಲೂ ಮಧ್ಯಾಹ್ನ ಅನ್ನದಾನ ಹಾಗೂ ಉರೂಸ್ ಸಮಾರೋಪ ದಿನದಂದು ಮಹಾ ಅನ್ನದಾನ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ.
ಜೆ ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಉರೂಸ್ ಸಮಿತಿ ಕೋಶಾಧಿಕಾರಿ.
ಕೆ.ಎಮ್ ಮುಹಮ್ಮದ್ ಕಮಾಲ್ ಕಾಜೂರು, ಕಿಲ್ಲೂರು ಮಸ್ಜಿದ್‌ನ ವಕ್ಫ್ ನಿಯೋಜಿತ ಆಡಳಿತಾಧಿಕಾರಿ.
ಮುಹಮ್ಮದ್ ರಫಿ,
ಎಂ.ಎ ಕಾಸಿಂ ಮಲ್ಲಿಗೆಮನೆ , ಮಾಜಿ ಅಧ್ಯಕ್ಷರು ಕಿಲ್ಲೂರು ಮಸ್ಜಿದ್ ಇವರು ಉಪಸ್ಥಿತರಿದ್ದರು.

error: Content is protected !!