ಧರ್ಮಸ್ಥಳದಲ್ಲಿ ಅನ್ಯಕೋಮಿನ ಜೋಡಿಯನ್ನು ಹಿಡಿದ ಹಿಂದೂ ಕಾರ್ಯಕರ್ತರು..!:ಲಾಡ್ಜ್ ನಲ್ಲಿ ರೂಂ ಮಾಡಲು ಯತ್ನಿಸಿದ್ದ ಜೋಡಿ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ವಿಚಾರಣೆ

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಕನ್ಯಾಡಿಯ ಖಾಸಗಿ ಲಾಡ್ಜ್ ಗಳಲ್ಲಿ ಇಂದು ಬೆಳಗ್ಗೆ ರೂಂ ಮಾಡಲು ಹೋಗುತ್ತಿದ್ದ ಅನ್ಯಕೋಮಿನ ಜೋಡಿಯನ್ನು ಹಿಂದೂ ಕಾರ್ಯಕರ್ತರು ಹಿಡಿದು ಧರ್ಮಸ್ಥಳ ಪೊಲೀಸರ ವಶಕ್ಕೆ ನೀಡಿದ ಘಟನೆ ನಡೆದಿದೆ.


ಚಿತ್ರದುರ್ಗ ಜಿಲ್ಲೆಯ ದಾದಫೀರ್ ಮತ್ತು ವಿವಾಹಿತ ಮಹಿಳೆ ಉಮಾ ಎಂಬವರು ಐಡಿ ಕಾರ್ಡ್ ನೀಡಿ ರೂಂ ಪಡೆಯಲು ಯತ್ನಿಸುತ್ತಿದ್ದು ಆದರೆ ಅನ್ಯಕೋಮಿನ ಜೋಡಿ ಆಗಿದ್ದರಿಂದ ಯಾವ ಲಾಡ್ಜ್ ಮಾಲೀಕರು ಕೂಡ ರೂಂ ನೀಡದೆ ವಾಪಸ್ ಕಳುಹಿಸಿದ್ದರು. ಹೀಗಾಗಿ ಮಾಹಿತಿ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಜ.25 ರಂದು ಬೆಳಗ್ಗೆ ಇಬ್ಬರನ್ನು ಹಿಡಿದು ವಿಚಾರಿಸಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೋಷಕರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದು ಯಾವ ಕಾರಣಕ್ಕೆ ಧರ್ಮಸ್ಥಳಕ್ಕೆ ಬಂದಿರುವುದು ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅನ್ಯಕೋಮಿನ ವಿಚಾರದ ಮಾಹಿತಿ ತಿಳಿದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದಾರೆ.

error: Content is protected !!