ಬೆಳ್ತಂಗಡಿ : ಇತಿಹಾಸ ಪ್ರಸಿದ್ಧ ಮಾಗಣೆ ದೇವಸ್ಥಾನ ಸಂಗಮ ಕ್ಷೇತ್ರ ಪಜಿರಡ್ಕ ಕಲ್ಮಂಜ ಬ್ರಹ್ಮಕಲಶೋತ್ಸವ ದಿನ ನಿಗದಿಯಾಗುತಿದ್ದಂತೆ ದೇವಸ್ಥಾನದ ಹತ್ತಿರದ ಪ್ರದೇಶದಲ್ಲಿ ಬೃಹತ್ ಹೋರಿಯೊಂದು ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ.
ಸುಮಾರು 800ವರ್ಷಗಳ ಇತಿಹಾಸವಿರುವ ಶಕ್ತಿ ಪೀಠ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವರ ಬ್ರಹ್ಮಕಲಶೋತ್ಸವವು ಜನವರಿ 31ರಿಂದ ಫೆ. 06ವರೆಗೆ ನಡೆಯಲಿದ್ದು ಇದೇ ವೇಳೆ ವಾರಸುದಾರರಿಲ್ಲದ, ಬೃಹಧಾಕರದ ‘ಹೋರಿ’ ರಾತ್ರಿ ಓಡಾಡುವುದು ಕೆಲವರಿಗೆ ಗೋಚರಿಸಿತು. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಹಗಲು ಕೂಡ ದಿನಕ್ಕೊಂದು ಪ್ರದೇಶದಲ್ಲಿ ಈ ಹೋರಿಗೆ ಕಾಣಸಿಗುತ್ತಿದೆ. ಬ್ರಹ್ಮಕಲಶೋತ್ಸವದ ಸುಸಂದರ್ಭದಲ್ಲಿ ಈ ಹೋರಿ ಕಾಣಸಿಕ್ಕಿರುವುದರಿಂದ ಶಕ್ತಿ ಪೀಠ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವರ ಕಾರ್ಣಿಕದ ಪ್ರತ್ಯಕ್ಷವಾಗಿ ಕೈಲಾಸದೀಷ ಶಿವನೇ ತನ್ನ ನಂದಿಯನ್ನು ಕಳುಹಿಸಿ ಕೊಟ್ಟಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.