ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಪಾತ ಪ್ರಕರಣ:ಪ್ರಮುಖ ಆರೋಪಿ ಸುಧೀರ್ ಚಿಕ್ಕಮಗಳೂರಿನಲ್ಲಿ ಬಂಧನ

ಬೆಳ್ತಂಗಡಿ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾದ ಬಾಲಕಿಯ ಗರ್ಭಪಾತ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸುಧೀರ್ ಜೋಗಿ ಎಂಬಾತನನ್ನು ಚಿಕ್ಕಮಗಳೂರಿನಲ್ಲಿ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

2021 ನೇ ಡಿ 26 ರಂದು ಟಿವಿ ನೋಡಲು ಬರುತಿದ್ದ ಬಾಲಕಿ ಮೇಲೆ ಆರೋಪಿ ಸುಧೀರ್ ಅತ್ಯಾಚಾರ ಮಾಡಿದ್ದು ನಂತರ ಬೆದರಿಕೆ ಹಾಕಿ ನಿರಂತರ ಅತ್ಯಾಚಾರವೆಸಗುತಿದ್ದ ಇದರಿಂದ ಬಾಲಕಿ ಗರ್ಭಿಣಿಯಾಗಿದ್ದಳು ನಂತರ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದು ಇದಕ್ಕೆ ಹಲವು ಮಂದಿ ಸಾಥ್ ನೀಡಿದ್ದರು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಸೇರಿದಂತೆ ಹಲವು ಸೆಕ್ಷನ್ ಅಡಿಯಲ್ಲಿ 2023 ನೇ ಜ 2 ರಂದು ಪ್ರಕರಣ ದಾಖಲಾಗಿತ್ತು.

ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೊಪ್ಪದಗಂಡಿ ನಿವಾಸಿ ಮೂರನೇ ಆರೋಪಿ ಮನೋಹರ(23) ಮತ್ತು ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೊಪ್ಪದಗಂಡಿ ನಿವಾಸಿ ನಾಲ್ಕನೇ ಆರೋಪಿ ಮಾಧವ ಯಾನೆ ಮಾಧು(30) ಎಂಬವರನ್ನು ಜ.7 ರಂದು ಬಂಧಿಸಿ ಜೈಲಿಗಟ್ಟಿದ್ದರು. ಇದೀಗ ಪ್ರಕರಣ ಪ್ರಮುಖ ಆರೋಪಿ ಕಡಿರುದ್ಯಾವರ ಗ್ರಾಮದ ಕೊಪ್ಪದಗುಂಡಿ ನಿವಾಸಿ ಸುಧೀರ್ ಜೋಗಿ (27) ಎಂಬಾತನನ್ನು ಚಿಕ್ಕಮಗಳೂರಿನಲ್ಲಿ ಬೆಳ್ತಂಗಡಿ ಪೊಲೀಸರು ಬಂಧಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಪ್ರತಿಭಟನೆ ಎಚ್ಚರಿಕೆ ನೀಡಿದ್ದ ಬಿಲ್ಲವ ಸಮುದಾಯ:

ಅತ್ಯಾಚಾರ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸದೆ ಸುಮ್ಮನಿದ್ದ ವಿರುದ್ಧ ಬಿಲ್ಲವ ಸಮುದಾಯ ಪೊಲೀಸ್ ಠಾಣೆಗೆ ತೆರಳಿ ತಕ್ಷಣ ಆರೋಪಿಯನ್ನು ಬಂಧಿಸಬೇಕು ಇಲ್ಲದಿದ್ದಲ್ಲಿ ಬೃಹತ್ ಪ್ರತಿಭಟನೆಯ ಸಭೆಯನ್ನು ಮಾಡುವ ಎಚ್ಚರಿಕೆ ನೀಡಿತ್ತು .

error: Content is protected !!