ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಸದಸ್ಯರಿಗೆ ತರಬೇತಿ ಕಾರ್ಯಾಗಾರ: ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಜೆಸಿ ಶಂಕರ್ ರಾವ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ

ಬೆಳ್ತಂಗಡಿ: ಜೆಸಿ ಸದಸ್ಯರಿಗೆ ಸಮಯ ಪಾಲನೆ ಮತ್ತು ಸಾಮಾಜಿಕ ಜಾಲತಾಣ ಎಂಬ ವಿಷಯಗಳ ಕುರಿತು ಜನವರಿ 16 ರಂದು ಜೆಸಿ ಭವನದಲ್ಲಿ ತರಬೇತಿ ಕಾರ್ಯಗಾರ ನಡೆದಿದೆ.

ಪ್ರೊವಿಷನಲ್ ವಲಯ ತರಬೇತುದಾರರುಗಳಾದ ಜೆಸಿ ಕಾರ್ತಿಕ್ ಶಾಸ್ತ್ರಿ ಮತ್ತು ದೀಪಕ್ ರಾಜ್ ವಿಷಯದ ಕುರಿತು ತರಬೇತಿ ನೀಡಿದರು.

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾದ ಜೆಸಿ ಶಂಕರ್ ರಾವ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಜೆಸಿ ಪ್ರಸಾದ್ ಬಿ. ಎಸ್, ಜೊತೆ ಕಾರ್ಯದರ್ಶಿಗಳಾದ ಜೆಸಿ ಸೃಜನ್ ರ್ ರೈ ಮತ್ತು ಜೂನಿಯರ್ ಜೆಸಿ ಅಧ್ಯಕ್ಷರಾದ ರಾಮಕೃಷ್ಣ, ಘಟಕದ ಪೂರ್ವಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ವೇದಿಕೆ ಆಹ್ವಾನವನ್ನು ಜೆಸಿ ರಕ್ಷಿತ್ ಅಂಡಿಜೆ ನೆರವೇರಿಸಿದರು, ಜೆಸಿ ವಾಣಿಯನ್ನು ಜೆಸಿ ಅರಿಹಂತ್ ಜೈನ್ ವಾಚಿಸಿದರು, ಜೆಸಿ ಸಚಿನ್ ಮತ್ತು ಜೆಸಿ ಸುಶಾಂತ್ ತರಬೇತುದಾರರನ್ನು ಪರಿಚಯಿಸಿದರು.

error: Content is protected !!