ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ (ರಿ) ದ.ಕ. ಜಿಲ್ಲೆ:ಬೆಳ್ತಂಗಡಿ ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ:ತಾಲೂಕು ಸಂಘಟನೆಯ ಅಧ್ಯಕ್ಷರಾದ ಸಂದೀಪ್ ರೆಂಕೆದಗುತ್ತು

ಬೆಳ್ತಂಗಡಿ : ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ (ರಿ) ದ.ಕ. ಜಿಲ್ಲೆ ಇದರ ಬೆಳ್ತಂಗಡಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಅಧ್ಯಕ್ಷರಾಗಿ ಸಂದೀಪ್ ರೆಂಕೆದಗುತ್ತು ಆಯ್ಕೆಯಾಗಿದ್ದಾರೆ.

ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಇವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ರಾಜ ಕೇಸರಿ ಸಂಘಟನೆಯ ಗೌರವ ಸಲಹೆಗಾರರಾಗಿ ಪರಮಪೂಜ್ಯ ಶ್ರೀ ರಾಜಶೇಖರನಂದ ಸ್ವಾಮೀಜಿ ಸ್ವಾಮೀಜಿ ಗುರುಪುರ, ಕಟ್ಟೆಮಾರು ಮಂತ್ರದೇವತೆ ಸಾನಿಧ್ಯದ ಧರ್ಮದರ್ಶಿಗಳಾದ ಮನೋಜ್ ಕಟ್ಟೆಮಾರು, ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸಂಪತ್ ಬಿ. ಸುವರ್ಣ, ಕಾನೂನು ಗೌರವ ಸಲಹೆಗಾರರಾಗಿ ಪ್ರಶಾಂತ್ ಎಂ., ವೈದ್ಯಕೀಯ ಗೌರವ ಸಲಹೆಗಾರರಾಗಿ ಅಜಯ್‌ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಚಂದ್ರಶೇಖರ್ ನೆರಿಯ, ಸಂಘಟನಾ ಕಾರ್ಯದರ್ಶಿಯಾಗಿ ವಿನೋದ್ ಪೂಜಾರಿ ಕಕ್ಕುಂಜೆ, ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್ ಪಣಕಾಜೆ, ಕಾರ್ಯದರ್ಶಿಯಾಗಿ ಪ್ರಶಾಂತ್ ಗುರುವಾಯನಕೆರೆ, ಸಂಚಾಲಕರಾಗಿ ಶಶಿಕಾಂತ್ ಗುರುವನಕೆರೆ, ಸಹ ಸಂಚಾಲಕರಾಗಿ ಗಣೇಶ್ ಲಾಯಿಲ, ಕೋಶಾಧಿಕಾರಿಯಾಗಿ ಸುಮಂತ್ ಕಾಯರ್ತಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಬಾಲಕೃಷ್ಣ ನಿಡಿಗಲ್, ಕಾರ್ಯಕ್ರಮ ವ್ಯವಸ್ಥಾಪಕರಾಗಿ ರಾಮಣ್ಣ ನಾಳ ಹಾಗೂ ಸಾಮಾಜಿಕ ಜಾಲತಾಣಕ್ಕೆ ಸಂಪತ್ ಬೆಳ್ತಂಗಡಿ ನೇಮಕಗೊಂಡಿದ್ದಾರೆ.

error: Content is protected !!